ಬೆಂಗಳೂರು | ಶಾಲೆಗೆ ಬಾಂಬ್ ಬೆದರಿಕೆ: ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳ
Update: 2023-05-09 07:37 GMT
ಬೆಂಗಳೂರು,ಮೇ 9: ನಾಳೆ ಚುನಾವಣಾ ಕೆಲಸಕ್ಕೆ ಶಾಲೆಗಳು ಮತಗಟ್ಟೆಗಳಾಗಿ ಬದಲಾಗುತ್ತಿರುವ ಹೊತ್ತಿನಲ್ಲೇ ನಗರದ ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಬಂದಿರುವುದು ಆನೇಕಲ್ ನಲ್ಲಿ ಮಂಗಳವಾರ ವರದಿಯಾಗಿದೆ.
ಇಂದು ಬೆಳಗ್ಗೆ 7.05ಕ್ಕೆ ಶಾಲೆಗೆ ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಸ್ಫೋಟಕ ಡಿವೈಸ್ ಶಾಲಾ ಕಟ್ಟದಲ್ಲಿ ಅಳವಡಿಸಿದೆ ಎಂದು ಒಕ್ಕಣೆಯಿರುವ ಇ- ಮೇಲ್ ಬಂದಿದ್ದು, ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಶಾಲೆಯ ಆವರಣದ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಕಳೆದ ಬಾರಿಯೂ ಇಂತಹ ಪ್ರಕರಣ ದಾಖಲಾಗಿದ್ದು ಹೆಬ್ಬಗೋಡಿ ಪೊಲೀಸರು ದೂರು ದಾಖಲಿಸಿದ್ದರು.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿ ಕಾರ್ಜುನ ಬಾಲದಂಡಿ, ಎಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಲಕ್ಷ್ಮಿನಾರಾಯಣ ತಂಡ ಪರಿಶೀಲನೆ ನಡೆಸಿದ್ದಾರೆ.