ಕಪ್ ಎಲ್ಲವೂ ಅವರದ್ದೆ, ಆದರೆ ಸರಕಾರ ಮಾತ್ರ ನಮ್ಮದು: ಆರ್. ಅಶೋಕ್ ಗೆ ಡಾ.ಜಿ ಪರಮೇಶ್ವರ್ ತಿರುಗೇಟು

ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಡಿಸಿಎಂ

Update: 2023-05-12 06:25 GMT

ಬೆಂಗಳೂರು:  ನಾಳೆ (ಮೇ 13) ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದ್ದು. ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ ಪರಮೇಶ್ವರ್, ''ಈ ಬಾರಿ ನಾವು ಬಹುಮತದ ಸರಕಾರ ರಚನೆ ಮಾಡುತ್ತೇವೆ. 130ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಇನ್ನು  'ಕಪ್ ನಮ್ಮದೇ' ಎಂಬ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಸಿ, ''ಕಪ್ ಎಲ್ಲವೂ ಅವರದ್ದೆ, ಆದರೆ ಸರಕಾರ ಮಾತ್ರ ನಮ್ಮದು' ಎಂದು​ ತಿರುಗೇಟು ನೀಡಿದರು. 

''ಮುಖ್ಯಮಂತ್ರಿ ಆಯ್ಕೆ ಬಗ್ಗೆ ಅಂತಿಮವಾಗಿ ಹೈಕಮಾಂಡ್​ ತೀರ್ಮಾನ ಮಾಡುತ್ತೆ. ಈ ಬಾರಿ ಹೊಸ ಪದ್ಧತಿ ಏನೂ ಇಲ್ಲ'' ಎಂದು ಇದೇ ವೇಳೆ ಪರಮೇಶ್ವರ್  ಅವರು ಸ್ಪಷ್ಟಪಡಿಸಿದರು. 

Similar News