54 ಲಿಂಗಾಯತ, 46 ಒಕ್ಕಲಿಗ ಸಮುದಾಯದ ಶಾಸಕರು ಆಯ್ಕೆ

Update: 2023-05-14 14:52 GMT

ಬೆಂಗಳೂರು, ಮೇ 14: ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಅತಿದೊಡ್ಡ ಸಮುದಾಯದ ವಾದ ಲಿಂಗಾಯತ ವೀರಶೈವ ಸಮುದಾಯದಿಂದ 54 ಮಂದಿ ಹಾಗೂಒಕ್ಕಲಿಗ ಸಮುದಾಯದ 46 ಮಂದಿ ಸೇರಿದಂತೆ ನೂರಕ್ಕೂ ಅಧಿಕ ಮಂದಿ ನೂತನ ಶಾಸಕರು ಆಯ್ಕೆಯಾಗಿದ್ದಾರೆ.

ಸಾಮಾನ್ಯವಾಗಿ ಲಿಂಗಾಯತ ವೀರಶೈವ ಸಮುದಾಯದವರು ಬಿಜೆಪಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷದಿಂದ 34, ಬಿಜೆಪಿಯಿಂದ 19, ಜೆಡಿಎಸ್‍ನಿಂದ 2 ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಶಾಸನ ಸಭೆಗೆ ಆಯ್ಕೆಯಾಗಿರುವುದು ವಿಶೇಷವಾಗಿದೆ.

ಒಕ್ಕಲಿಗ ಸಮುದಾಯ ಶಾಸಕರು ಕಾಂಗ್ರೆಸ್‍ನಿಂದ 23, ಬಿಜೆಪಿ-11, ಜೆಡಿಎಸ್-10 ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಶಾಸಕರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‍ನಿಂದ 3, ಬಿಜೆಪಿಯಿಂದ 7 ಮಂದಿ ಸಹಿತ 10 ಮಂದಿ ಬ್ರಾಹ್ಮಣ ಸಮುದಾಯದವರು ಆಯ್ಕೆಗೊಂಡಿದ್ದಾರೆ.

ಕುರುಬ-13, ಮುಸ್ಲಿಮ್-ಕ್ರೈಸ್ತ, ಜೈನ್-11, ಬೆಸ್ತ, ಕೋಲಿ, ಮೊಗವೀರ-3, ಬಿಲ್ಲವ-ಈಡಿಗ-9, ಬಂಟರು-5, ಮರಾಠ-3, ಕೊಡವ-1, ರಜಪೂತ್-1, ರೆಡ್ಡಿ-7, ಎಸ್‍ಟಿ(ವಾಲ್ಮೀಕಿ)-18, ಎಸ್‍ಸಿ(ಬಲಗೈ)-14, ಎಸ್‍ಸಿ(ಬಲಗೈ)-8, ಎಸ್‍ಸಿ(ಭೋವಿ)-7, (ಎಸ್‍ಸಿ)ಲಂಬಾಣಿ-6, ಎಸ್‍ಸಿ(ಮೊಗವೀರ)-1, ಉಪ್ಪಾರ-1, ಇತರೆ ಸಮುದಾಯದ ಆರು ಮಂದಿ ಸೇರಿದಂತೆ 224 ಮಂದಿ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ.

Similar News