ಸಿಟಿ ರವಿ ನನ್ನನ್ನು ಬಿಜೆಪಿಯಿಂದ ಹೊರ ಕಳಿಸಿದರು, ಈಗ ಅವರು ಕ್ಷೇತ್ರವನ್ನೇ ಖಾಲಿ ಮಾಡಬೇಕಾಯ್ತು: ಎಂ.ಪಿ. ಕುಮಾರಸ್ವಾಮಿ

''ಯಡಿಯೂರಪ್ಪ ಫೋನ್ ಸ್ವಿಚ್​​​ ಆಫ್ ಮಾಡಿದ್ದರೆ ಬಿಜೆಪಿ 50 ಸೀಟ್ ಅಷ್ಟೇ ಬರುತ್ತಿತ್ತು''

Update: 2023-05-15 05:40 GMT

ಚಿಕ್ಕಮಗಳೂರು: ನನ್ನನ್ನು ಬಿಜೆಪಿಯಿಂದ ಸಿ.ಟಿ.ರವಿ ಕಳಿಸಿದರು, ಆದರೆ ಈಗ ಅವರು ಕ್ಷೇತ್ರವನ್ನೇ ಖಾಲಿ ಮಾಡಬೇಕಾಯ್ತು ಎಂದು ಎಂ.ಪಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಚಿಕ್ಕಮಗಳೂರು ನಿನ್ನೆಯಿಂದ ವೀರಶೈವ ಲಿಂಗಾಯುತರ ಕ್ಷೇತ್ರ. ಚಿಕ್ಕಮಗಳೂರಲ್ಲಿ ಒಕ್ಕಲಿಗರು ಇರೋದು ಆರೇ ಸಾವಿರ ಮತದಾರರು ಅಷ್ಟೇ. ಸಿ.ಟಿ.ರವಿ ದತ್ತಮಾಲೆ, ಅಹಿತಕರ ಘಟನೆ ಇಟ್ಕಂಡ್ ಹೋದ್ರು ಇನ್ಮುಂದೆ ಆಗಲ್ಲ' ಎಂದರು. 

'ಯಡಿಯೂರಪ್ಪ  ಸ್ವಿಚ್ ಆಫ್ ಮಾಡಲಿಲ್ಲ, ಮಾಡಿದ್ರೆ ಬಿಜೆಪಿ 50 ಸೀಟ್ ಅಷ್ಟೆ ಬರುತ್ತಿತ್ತು' ಎಂದು ಟೀಕಿಸಿದರು.

'ಮೂಡಿಗೆರೆ ಜೆಡಿಎಸ್ ನಲ್ಲಿ ಬೂತ್ ಕಮಿಟಿ, ಪಕ್ಷ ಸಂಘಟನೆ ಇರಲಿಲ್ಲ, ಹಾಗಾಗಿ ಸೋತೆ. ಎಲ್ಲಾ ಸರಿ ಮಾಡಿಕೊಂಡು ಚುನಾವಣೆ ಮಾಡೋದು ಆಗ್ತಿರಲಿಲ್ಲ, ಕಷ್ಟವಾಗಿತ್ತು. ಮುಂದೆ ಎಲ್ಲಾ ಸರಿ ಮಾಡಿಕೊಂಡು ಜಿಪಂ, ತಾಪಂ ಎಲೆಕ್ಷನ್ ಮಾಡ್ತೀವಿ' ಎಂದು ಹೇಳಿದರು.

Similar News