ರೆಡ್ಡಿ ಸಮುದಾಯದ ಶಾಸಕರುಗಳಿಗೆ ಪ್ರಾತಿನಿಧ್ಯ ನೀಡಲು ‘ರೆಡ್ಡಿ ಜನಸಂಘ’ ಆಗ್ರಹ

Update: 2023-05-15 14:08 GMT

ಬೆಂಗಳೂರು, ಮೇ 15: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರೆಡ್ಡಿ ಜನಾಂಗದ 12 ಮಂದಿ ಶಾಸಕರು ಆಯ್ಕೆಯಾಗಿದ್ದು, ಸರಕಾರದಲ್ಲಿ ರೆಡ್ಡಿ ಸಮುದಾಯದ ಶಾಸಕರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಕರ್ನಾಟಕ ರೆಡ್ಡಿ ಜನಸಂಘ ಇಂದಿಲ್ಲಿ ಮನವಿ ಮಾಡಿದೆ. 

ಸೋಮವಾರ ಈ ಸಂಬಂಧ ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷ ಜಯರಾಂ ರೆಡ್ಡಿ ಎಸ್., ‘ರಾಜ್ಯದಲ್ಲಿ ರೆಡ್ಡಿ ಜನಾಂಗ ಒಂದು ಪ್ರಮುಖ ಸಮುದಾಯ. 12 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದು, ಆ ಪೈಕಿ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್ ಸೇರಿ ಹಲವು ಹಿರಿಯರು ಆಯ್ಕೆಯಾಗಿದ್ದಾರೆ. ಸರಕಾರದಲ್ಲಿ ಸಮುದಾಯದ ಶಾಸಕರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು’ ಎಂದು ಆಗ್ರಹಿಸಿದರು.

Similar News