ಗೃಹಿಣಿ ಅನುಮಾನಾಸ್ಪದ ಸಾವು
ಬೆಂಗಳೂರು, ಮೇ 15: ಹಸುಗಳ ಮೇವಿಗಾಗಿ ವಿದ್ಯುತ್ ಯಂತ್ರ ದಿಂದ ಹುಲ್ಲು ಕತ್ತರಿಸುವಾಗ ವಿದ್ಯುತ್ ಸ್ವರ್ಶಿಸಿ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಲ್ಲಿನ ಪಾಲ್ ದಿನ್ನೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಮನುಶ್ರೀ (29) ಎಂದು ಗುರುತಿಸಲಾಗಿದೆ.
ಮನುಶ್ರೀಯನ್ನು 10 ವರ್ಷಗಳ ಹಿಂದೆ ಪಾಲ್ ದಿನ್ನೆ ಗ್ರಾಮದ ಮೋಹನ್ ಕುಮಾರ್ ಜತೆ ವಿವಾಹ ಮಾಡಲಾಗಿತ್ತು. ಮದುವೆ ಸಮಯದಲ್ಲಿ 10 ಲಕ್ಷ ಮೌಲ್ಯದ ಚಿನ್ನಾಭರಣ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಲಾಗಿತ್ತು. ದಂಪತಿಗೆ ಒಂದು ಗಂಡು ಮಗು ಸಹ ಇದೆ. ಇತ್ತೀಚೆಗೆ ಮೋಹನ್ ಕುಮಾರ್ ಮತ್ತು ಆತನ ಕುಟುಂಬದವರು ಮನುಶ್ರೀಗೆ ಕಿರುಕುಳ ಕೊಡುತ್ತಿದ್ದರು ಎಂಬ ಮನುಶ್ರೀ ಕುಟುಂಬಸ್ಥರು ಆರೋಪಿಸಿದ್ದು, ಈ ಸಂಬಂಧ ವರದಕ್ಷಿಣೆ ಹಣಕ್ಕಾಗಿ ಮಗಳನ್ನ ಕೊಲೆ ಮಾಡಿದ್ದಾರೆಂದು ಆರೋಪಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.