ಬಿ.ಕೆ ಹರಿಪ್ರಸಾದ್, ಮಧು ಬಂಗಾರಪ್ಪ ಸೇರಿದಂತೆ ಐವರನ್ನು ಸಚಿವರನ್ನಾಗಿ ಮಾಡಲು ಸ್ವಾಮಿ ವಿಖ್ಯಾತಾನಂದ ಮನವಿ
Update: 2023-05-16 16:43 GMT
ಬೆಂಗಳೂರು: ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಶಾಸಕ ಮಧು ಬಂಗಾರಪ್ಪ ಸೇರಿದಂತೆ ಈಡಿಗ ಸಮುದಾಯದ ಐದು ಮಂದಿ ಅಭ್ಯರ್ಥಿಗಳಿಗೆ ಕರ್ನಾಟಕ ಸರಕಾರದ ಮಂತ್ರಿಮಂಡಲದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕೆಂದು ಸ್ವಾಮಿ ವಿಖ್ಯಾತಾನಂದ ಅವರು ಮನವಿ ಮಾಡಿದ್ದಾರೆ.
ಈಡಿಗ ಹಾಗು 25 ಪಂಗಡಗಳನ್ನೊಳಗೊಂಡ ಈ ಸಮುದಾಯದ ಅಭ್ಯರ್ಥಿಗಳಾದ ಬಿ.ಕೆ. ಹರಿಪ್ರಸಾದ್, ಎಚ್. ಆರ್. ಗವಿಯಪ್ಪ, ಹರೀಶ್ ಕುಮಾರ್, ಮಧು ಎಸ್. ಬಂಗಾರಪ್ಪ, ಬೇಲೂರು ಗೋಪಾಲಕೃಷ್ಣ, ಬೀಮಣ್ಣ ನಾಯ್ಕ ಅವರಿಗೆ ಕರ್ನಾಟಕ ಸರಕಾರದ ಮಂತ್ರಿಮಂಡಲದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕಾಗಿ ಸಮಸ್ತ ಈಡಿಗ ಸಮುದಾಯದ ಪರವಾಗಿ ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಆರ್ಯ ಈಡಿಗ ಮಹಾಸಂಸ್ಥಾನ, ಸೋಲೂರು ಪೀಠಾಧಿಪತಿ ಸ್ವಾಮಿ ವಿಖ್ಯಾತಾನಂದ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.