ಕನಿಷ್ಠ 10 ಮಂದಿಗಾದರೂ ಹೊಸಬರಿಗೆ ಸಚಿವ ಸ್ಥಾನ ಕೊಡಬೇಕು: ಸತೀಶ್ ಜಾರಕಿಹೊಳಿ ಆಗ್ರಹ
Update: 2023-05-20 05:37 GMT
ಬೆಂಗಳೂರು: 'ನೂತನ ಸಚಿವ ಸಂಪುಟದಲ್ಲಿ ಕನಿಷ್ಠ 10 ಮಂದಿಗಾದರೂ ಹೊಸಬರಿಗೆ ಅವಕಾಶ ಕೊಡಬೇಕು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವಂತೆ ನಾನು ಹಿರಿಯರಿಗೆ ಸಲಹೆ ನೀಡುತ್ತೇನೆ' ಎಂದು ತಿಳಿಸಿದರು.
'ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಅವರು ಒಬ್ಬರೇ ಮುಂದುವರಿಯಲಿದ್ದಾರೆ ಎಂದ ಅವರು, ಮೊದಲ ಸಂಪುಟದಲ್ಲೇ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ' ಎಂದು ತಿಳಿಸಿದರು.