ಸಿಎಂ ಸಚಿವಾಲಯದ 191 ಮಂದಿಗೆ ಕಾರ್ಯಮುಕ್ತಗೊಳಿಸಿ ಆದೇಶ
Update: 2023-05-20 16:25 GMT
ಬೆಂಗಳೂರು, ಮೇ 20: ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಸ್ಥಳ ನಿಯುಕ್ತಿ, ನಿಯೋಜನೆ, ಒಪ್ಪಂದ, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಒಟ್ಟು 191 ಅಧಿಕಾರಿ, ನೌಕರರನ್ನು ಕಾರ್ಯ ಮುಕ್ತಗೊಳಿಸಿ ಮೇ 19ರ ಅಪರಾಹ್ನದಿಂದ ಜಾರಿಗೆ ಬರುವಂತೆ ಸಿಬ್ಬಂದಿ ಮತ್ತು ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.