ಡಿ.ಕೆ ಸುರೇಶ್ ಜತೆ ನನ್ನ ಸಂಬಂಧ ಚೆನ್ನಾಗಿದೆ, ವದಂತಿಗಳನ್ನು ಹಬ್ಬಿಸಬೇಡಿ: ಸಚಿವ ಎಂ.ಬಿ.ಪಾಟೀಲ್

''ನಮ್ಮಿಬ್ಬರಿಗೂ ಎಚ್ಚರಿಕೆ ಕೊಡುವವರು ಯಾರೂ ಇಲ್ಲ''

Update: 2023-05-24 10:34 GMT

ಬೆಂಗಳೂರು: 'ನನ್ನ ಹಾಗೂ ಸಂಸದ ಡಿಕೆ ಸುರೇಶ್ ಸಂಬಂಧ ಚೆನ್ನಾಗಿದೆ, ನಮ್ಮಿಬ್ಬರಿಗೆ ಎಚ್ಚರಿಕೆ ಕೊಡುವವರು ಯಾರೂ ಇಲ್ಲ, ವಿನಾಕಾರಣ ವದಂತಿಗಳನ್ನು ಹಬ್ಬಿಸಬೇಡಿ' ಎಂದು ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. 

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನಾನು 6 ಬಾರಿ ಶಾಸಕನಾಗಿದ್ದೇನೆ, ಗೃಹಸಚಿವನಾಗಿ ಕೆಲಸ ಮಾಡಿದ್ದೇನೆ. ನಮ್ಮ ತಂದೆ-ತಾಯಿನೇ ಒಂದೂ ದಿನ ನನಗೆ ವಾರ್ನ್ ಮಾಡಿಲ್ಲ. ವಾರ್ನಿಂಗ್ ಎಂಬ ಪದ ನಮ್ಮ ಡಿಕ್ಷನರಿಯಲ್ಲೇ ಇಲ್ಲ. ವಾರ್ನಿಂಗ್ ಕೊಡ್ತೇವೆ ವಿನಃ ನಾವು ತೆಗೆದುಕೊಳ್ಳಲ್ಲ. ನಾನು​ ಯಾರಿಗೂ ಹೆದರುವವನಲ್ಲ' ಎಂದು ಹೇಳಿದರು. 

ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಹೇಳಿಕೆ ನೀಡಿದ್ದಕ್ಕೆ ಸಚಿವ ಎಂ.ಬಿ.ಪಾಟೀಲ್​ ಅವರಿಗೆ ಡಿಕೆ ಸುರೇಶ್ ಅವರು ಎಚ್ಚರಿಕೆ ನೀಡಿದ್ದಾಂದು ಕೆಲವು ಮಾಧ್ಯಮಗಳು ವರದಿ ಮಾಡಿತ್ತು. ಇದೀಗ ಖುದ್ದು ಎಂ.ಬಿ.ಪಾಟೀಲ್ ಅವರೇ ಸ್ಪಷ್ಟನೆ ನೀಡಿದ್ದಾರೆ. 

Similar News