ಸಾಲಿಡಾರಿಟಿ ಉಡುಪಿ ಜಿಲ್ಲಾಧ್ಯಕ್ಷರಾಗಿ ನಬೀಲ್ ಗುಜ್ಜರ್‌ಬೆಟ್ಟು ಆಯ್ಕೆ

Update: 2023-05-25 15:10 GMT

ಉಡುಪಿ: ಸಾಲಿಡಾರಿಟಿ ಯೂತ್‌ಮೂವ್‌ಮೆಂಟ್ ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ನಬೀಲ್ ಗುಜ್ಜರ್‌ಬೆಟ್ಟು ಅವರನ್ನು ಆಯ್ಕೆ ಮಾಡಲಾಗಿದೆ.

ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ರಾಜ್ಯಾಧ್ಯಕ್ಷ ಲಬೀದ್ ಶಾಫಿ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಯಕರ್ತರು ಸರ್ವಾನುಮತದಿಂದ ನಬೀಲ್ ಗುಜ್ಜರ್‌ಬೆಟ್ಟು ಅವರನ್ನು ಆಯ್ಕೆ ಮಾಡಿದರು.

ಪ್ರಧಾನ ಕಾರ್ಯದರ್ಶಿ ಯಾಸೀನ್ ಕೋಡಿಬೆಂಗ್ರೆ, ಸಂಘಟನಾ ಕಾರ್ಯ ದರ್ಶಿಯಾಗಿ ಅಕ್ರಮ್ ಹೂಡೆ, ಮಾಧ್ಯಮ ಮತ್ತು ಸಂಪರ್ಕ ಕಾರ್ಯದರ್ಶಿಯಾಗಿ ಮುಹಮ್ಮದ್ ಶಾರೂಕ್ ತೀರ್ಥಹಳ್ಳಿ, ಕ್ರೀಡಾ ಕಾರ್ಯದರ್ಶಿ ಯಾಗಿ ಝಕ್ರಿಯಾ ನೇಜಾರ್, ಜಿಲ್ಲಾ ಸಮಿತಿಯ ಸದಸ್ಯರಾಗಿ ನಿಹಾಲ್ ಕಿದಿಯೂರು, ಇಫ್ತಿಕಾರ್ ಉಡುಪಿ, ಶುಐಬ್ ಮಲ್ಪೆ, ಜಾಬೀರ್ ಖತೀಬ್, ರಂಝಾನ್ ಕಾಪು, ಬಿಲಾಲ್ ಮಲ್ಪೆ, ಮಿನ್‌ಹಾಜ್, ಸರ್ಫರಾಝ್ ಮನ್ನಾ, ಝಿಯಾ ಉಡುಪಿ ಅವರನ್ನು ಆಯ್ಕೆ ಮಾಡಲಾಯಿತು. 

Similar News