ಮೇ 28ರಂದು ಯುಪಿಎಸ್‌ಸಿ ಪರೀಕ್ಷೆ: ಒಂದು ಗಂಟೆ ಮೊದಲೇ 'ನಮ್ಮ ಮೆಟ್ರೊ' ರೈಲು ಸಂಚಾರ ಆರಂಭ

Update: 2023-05-26 16:22 GMT

ಬೆಂಗಳೂರು, ಮೇ 26: ಕೇಂದ್ರ ಲೋಕ ಸೇವಾ ಆಯೋಗದ ಯುಪಿಎಸ್‍ಸಿ ಪೂರ್ವಭಾವಿ ಪರೀಕ್ಷೆ ಮೇ 28ರಂದು ನಡೆಯುಲಿದ್ದು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಅಂದು ನಮ್ಮ ಮೆಟ್ರೊ ರೈಲುಗಳ ಸಂಚಾರ ಬೆಳಿಗ್ಗೆ 6ರಿಂದ ಆರಂಭವಾಗಲಿದೆ. 

ಸಾಮಾನ್ಯವಾಗಿ ರವಿವಾರ ಬೆಳಿಗ್ಗೆ 7 ಗಂಟೆಯಿಂದ ನಮ್ಮ ಮೆಟ್ರೋ ಸಂಚಾರ ಆರಂಭವಾಗುತ್ತದೆ. ಆದರೆ ದೂರದ ಊರುಗಳಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ, ಬೈಯಪ್ಪನಹಳ್ಳಿ, ಕೆ.ಆರ್.ಪುರ ಮತ್ತು ವೈಟ್‍ಫೀಲ್ಡ್ ನಿಲ್ದಾಣಗಳಿಂದ ಮೊದಲ ರೈಲುಗಳು ಬೆಳಿಗ್ಗೆ 6 ಗಂಟೆಗೆ ಹೊರಡಲಿವೆ ಎಂದು ನಮ್ಮ ಮೆಟ್ರೋ ಸಂಸ್ಥೆ ಪತ್ರಿಕಾ ಪ್ರಟಣೆಯಲ್ಲಿ ಮಾಹಿತಿ ನೀಡಿದೆ.

Similar News