ನಿಟ್ಟೆ ವಿವಿ: ಬಿ.ಆರ್ಕ್ ಪದವಿಗೆ ಸೇರುವವರಿಗೆ ವಿದ್ಯಾರ್ಥಿ ವೇತನ

Update: 2023-05-26 16:44 GMT
  • whatsapp icon

ಮಂಗಳೂರು: ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಆರ್ಕಿಟೆಕ್ಚರ್ ವಿಭಾಗವು ಬಿ.ಆರ್ಕ್ ಪದವಿ ಕೋರ್ಸಿಗೆ ಸೇರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ  ನೀಡುವುದಾಗಿ  ಪ್ರಕಟಿಸಿದೆ.

ಆರ್ಕಿಟೆಕ್ಚನಲ್ಲಿ ಪದವಿ ಪಡೆಯಲು ಬಯಸುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹೆಚ್ಚು ಪ್ರಯೋಜನವಾಗಲಿದೆ. ನುರಿತ ಅಧ್ಯಾಪಕರ ತಂಡವನ್ನು ಒಳಗೊಂಡಿರುವ ನಿಟ್ಟೆ ವಿಶ್ವವಿದ್ಯಾಲಯದ ವಾಸ್ತು ಶಿಲ್ಪ ವಿಭಾಗವು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಇಲ್ಲಿ ಪ್ರಮುಖ ಆದ್ಯತೆ ನೀಡಲಾಗುತ್ತಿದೆ ಎಂದು ನಿಟ್ಟೆ ಇನ್ಸ್‌ಟಿಟ್ಯೂಟ್ ಆಪ್ ಆರ್ಕಿಟೆಕ್ಚರ್‌ನ ನಿರ್ದೇಶಕ ಪ್ರೊ.ವಿನೋದ್ ಅರಾನ್ಹ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಯ ವಾಸ್ತು ಶಿಲ್ಪ ವಿಭಾಗವು ವಾಸ್ತುಶಿಲ್ಪದಲ್ಲಿ ಸಾಧನೆ ಮಾಡಿದ ಹಲವು ಮಂದಿಯನ್ನು ಸಮಾಜಕ್ಕೆ ನೀಡಿದೆ. ಬ್ಯಾಚುಲರ್‌ಆಫ್ ಆರ್ಕಿಟೆಕ್ಚರ್ 5 ವರ್ಷಗಳ ವಿಶೇಷ ಕೋರ್ಸ್ ಆಗಿದ್ದು,ಇದು ವಾಸ್ತು ಶಿಲ್ಪದ ವಿನ್ಯಾಸ, ನಿರ್ಮಾಣ ಮತ್ತು ಯೋಜನೆಗಳ ಅಧ್ಯಯನದ ಮೇಲೆ ಕೇಂದ್ರೀಕೃತವಾಗಿದೆ. ವಿದ್ಯಾರ್ಥಿಗಳು ವಿನ್ಯಾಸ ಸ್ಟುಡಿಯೋದಲ್ಲಿ ತಮ್ಮ ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆಯ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಾರೆ. ಈ ಕೋರ್ಸ್‌ನಲ್ಲಿ ವಾಸ್ತು ಶಿಲ್ಪದ ಇತಿಹಾಸ, ಕಟ್ಟಡ ಸಾಮಾಗ್ರಿಗಳು ,ರಚನಾತ್ಮಕ ವ್ಯವಸ್ಥೆಗಳು ಪರಿಸರ ಅಧ್ಯಯನ, ನಗರೀಕರಣ ಯೋಜನೆ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿದೆ. ಇದೀಗ ಸ್ಕಾಲರ್ಶಿಪ್ ಕೂಡ ವ್ಯವಸ್ಥೆ ಮಾಡಿರುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ನೆರವಾಗಲಿದೆ. ವಿದ್ಯಾರ್ಥಿವೇತನ  ಕುರಿತ ಹೆಚ್ಚಿನ ಮಾಹಿತಿಗೆ https://nitte.edu.in/scholorship.phpಗೆ ಭೇಟಿ ನೀಡಬಹುದು ಮತ್ತು https://apply.nitte.edu.in ಅಧಿಕೃತ ಆನ್ ಲೈನ್ ಅಪ್ಲಿಕೇಸನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಅರಾನ್ಹ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಹ ಪ್ರಾಧ್ಯಾಪಕರಾದ ಅರುಲ್ ಪಾಲ್ ಮತ್ತು ಪಾಲಾಕ್ಷ ಶೆಟ್ಟಿ ಉಪಸ್ಥಿತರಿದ್ದರು.

Similar News