ಆರ್‌ಸಿಬಿ ತಂಡವನ್ನು ಟ್ರೋಲ್ ಮಾಡಿದ ಆರೋಪ: ಯುವಕನಿಗೆ ಹಲ್ಲೆ

Update: 2023-05-28 12:55 GMT

ಕಾಪು: ಆರ್‌ಸಿಬಿ ತಂಡವನ್ನು ಟ್ರೋಲ್ ಮಾಡಿ ಸ್ಟೇಟಸ್ ಹಾಕಿದ ಕಾರಣಕ್ಕೆ ಯುವಕನೋರ್ವನಿಗೆ ಹಲ್ಲೆ ನಡೆಸಿ ರುವ ಘಟನೆ ಮಲ್ಲಾರು ಗ್ರಾಮದ ಕೊಂಬಗುಡ್ಡೆ ಎಂಬಲ್ಲಿ ಮೇ 26ರಂದು ಸಂಜೆ ವೇಳೆ ನಡೆದಿದೆ.

ಐಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ಸಿಎಸ್‌ಕೆ ತಂಡ ಗೆದ್ದ ಬಗ್ಗೆ ಕೊಂಬ ಗುಡ್ಡೆಯ ವರ್ಷಿತ್ ಪೂಜಾರಿ(21) ಎಂಬವರು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ಇದಕ್ಕೆ ರಾಘವೇಂದ್ರ ಎಂಬಾತ ವರ್ಷಿತ್‌ಗೆ ಫೋನ್ ಮಾಡಿ ಆಕ್ಷೇಪಿಸಿದ್ದನು. ಬಳಿಕ ವರ್ಷಿತ್ ಆರ್‌ಸಿಬಿ ತಂಡವನ್ನು ಟ್ರೋಲ್ ಮಾಡಿ ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿದ್ದರು.

ಮೇ 25ರಂದು ಕರೆ ಮಾಡಿದ ರಾಘವೇಂದ್ರ, ಸ್ಟೇಟಸ್ ಬಗ್ಗೆ ಆಕ್ಷೇಪಿಸಿ, ವರ್ಷಿತ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಇದೇ ಕಾರಣಕ್ಕೆ ಮೇ 26ರಂದು ಸಂಜೆ ವೇಳೆ ಮೈದಾನದಲ್ಲಿ ವರ್ಷಿತ್‌ಗೆ  ರಾಘವೇಂದ್ರಸ ಸುಧೀರ ಹಾಗೂ ಇನ್ನೊಬ್ಬ ಜೊತೆಗೂಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಇದರಿಂದ ಗಾಯಗೊಂಡಿರುವ ವರ್ಷಿತ್ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News