ಕಾಂಗ್ರೆಸ್ ನಾಯಕರು ದೇಶಭಕ್ತಿಯನ್ನು RSSನಿಂದ ಕಲಿಯಲಿ: ಬಿಜೆಪಿ ಸಲಹೆ
ಬೆಂಗಳೂರು: 'ಆರೆಸ್ಸೆಸ್ ಅನ್ನು ನೆನೆಯದಿದ್ದರೆ ಕಾಂಗ್ರೆಸ್ ನಾಯಕರಿಗೆ ಜೀರ್ಣವಾಗುವುದಿಲ್ಲ' ಎಂದು ಬಿಜೆಪಿ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ವಿಪಕ್ಷ ಬಿಜೆಪಿ @BJP4Karnataka, '' ಸಚಿವ ಸತೀಶ್ ಜಾರಕಿಹೊಳಿ ಅವರ ಆರೆಸ್ಸೆಸ್ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದೆ.
''ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಇಲ್ಲಸಲ್ಲದ್ದನ್ನು ಊಹಿಸಿಕೊಂಡು ಮಾತನಾಡುವುದನ್ನು ಬಿಟ್ಟು ಕಾಂಗ್ರೆಸಿನ ನಾಯಕರಿಗೆ ಅತೀವವಾಗಿ ಕೊರತೆ ಇರುವ ದೇಶಭಕ್ತಿಯನ್ನು RSSನಿಂದ ಕಲಿಯಲಿ'' ಎಂದು ಬಿಜೆಪಿ ಸಲಹೆ ನೀಡಿದೆ.
''ಒಂದು ಸಂಘಟನೆ ನಿಷೇಧ ಮಾಡಿದ್ರೆ ಮತ್ತೊಂದು ಸಂಘಟನೆ ಹುಟ್ಟಿಕೊಳ್ಳುತ್ತದೆ. ಬದಲಾಗಿ RSSನಲ್ಲಿರುವ ದಲಿತರು, ಶೂದ್ರರು, ಕೆಳವರ್ಗದವರನ್ನು ಸೆಳೆಯಬೇಕಿದೆ. ಅವರಿಗೆ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆ ತಿಳಿಹೇಳುವ ಪ್ರಯತ್ನ ಮಾಡುತ್ತೇವೆ. RSSನಲ್ಲಿರುವ ದಲಿತರನ್ನು ಸೆಳೆಯುವ ಮೂಲಕ ಅಹಿಂದಾಗೆ ಮತ್ತಷ್ಟು ಶಕ್ತಿ ತುಂಬಬೇಕಿದೆ'' ಎಂಬ ಸಚಿವ ಜಾರಕಿಹೊಳಿ ಹೇಳಿಕೆ ನೀಡಿದ್ದರು.
RSS ಅನ್ನು ನೆನೆಯದಿದ್ದರೆ @INCKarnatakaದ ನಾಯಕರಿಗೆ ಜೀರ್ಣವಾಗುವುದಿಲ್ಲ.
— BJP Karnataka (@BJP4Karnataka) May 29, 2023
ಅಂದಹಾಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಇಲ್ಲಸಲ್ಲದ್ದನ್ನು ಊಹಿಸಿಕೊಂಡು ಮಾತನಾಡುವುದನ್ನು ಬಿಟ್ಟು ಕಾಂಗ್ರೆಸಿನ ನಾಯಕರಿಗೆ ಅತೀವವಾಗಿ ಕೊರತೆ ಇರುವ ದೇಶಭಕ್ತಿಯನ್ನು RSSನಿಂದ ಕಲಿಯಲಿ. https://t.co/ldKGjnGrXa