ಸ್ಥಳೀಯ ಸಂಸ್ಥೆಗಳ ಚುನಾವಣೆ; ಇವಿಎಂ ಜತೆಗೆ VVPAT ಯಂತ್ರಗಳನ್ನು ಅಳವಡಿಸುವಂತೆ ಆಯೋಗಕ್ಕೆ ಮನವಿ

Update: 2023-05-29 17:09 GMT

ಬೆಂಗಳೂರು, ಮೇ 29: ಮುಂಬರುವ ಜಿ.ಪಂ, ತಾ.ಪಂ., ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಹೊಸ ಮಾದರಿಯ ಇವಿಎಂ ಜೊತೆಗೆ ವಿವಿಪ್ಯಾಟ್ ಯಂತ್ರಗಳನ್ನು ಅಳವಡಿಸಿ ಚುನಾವಣೆಗಳನ್ನು ನಡೆಸಬೇಕೆಂದು ಪರಿಷತ್ ಸದಸ್ಯ ಪಿ.ಆರ್.ರಮೇಶ್ ರಾಜ್ಯ ಚುನಾವಣಾ ಆಯೋಗದ ಆಯುಕ್ತರಿಗೆ ಸೋಮವಾರ ಮನವಿ ನೀಡಿದ್ದಾರೆ.

ಆಯೋಗವು ಹಲವು ವರ್ಷಗಳಿಂದ ಹಳತಾದ ಇವಿಎಂಗಳನ್ನು ಬಳಸಿಕೊಂಡು ಬಂದಿದ್ದು, ಈಗ ಇವುಗಳ ಬಗೆಗೆ ಮತದಾರರ ಆತ್ಮವಿಶ್ವಾಸ ಕುಂದಿದೆ. ಆದ್ದರಿಂದ ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದ ಅನುಗುಣವಾಗಿ ಮತದಾರರಿಗೆ ಆತ್ಮವಿಶ್ವಾಸ ಹಾಗೂ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ವಿನೂತನ ಇವಿಎಂ ಜೊತೆಗೆ ವಿವಿಪ್ಯಾಟ್ ಯಂತ್ರಗಳನ್ನು ಅಳವಡಿಸುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ನಡೆಸಬೇಕು ಎಂದು ಪಿ.ಆರ್ ರಮೇಶ್ ತಿಳಿಸಿದರು.

ಒಂದು ವೇಳೆ ಆಯೋಗಕ್ಕೆ ಹೊಸ ಮಾದರಿಯ ಇವಿಎಂ ಜೊತೆಗೆ ವಿವಿಪ್ಯಾಟ್ ಯಂತ್ರಗಳು ಲಭ್ಯವಿಲ್ಲದ ಸಂದರ್ಭ ಬಂದರೆ ಆಯೋಗದಿಂದ ಈಗಾಗಲೇ ಗ್ರಾಮ ಪಂಚಾಯತ್ ಚುನಾವಣೆಗಳನ್ನು ನಡೆಸುವ ರೀತಿಯಲ್ಲಿಯೇ ಪರ್ಯಾಯವಾಗಿ ಮತಪತ್ರ ಆಧಾರಿತ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಪಿ.ಆರ್ ರಮೇಶ್ ಸಲಹೆ ನೀಡಿದರು.

Similar News