ಬೆಂಗಳೂರು: ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

Update: 2023-05-29 17:38 GMT

ಬೆಂಗಳೂರು, ಮೇ 29: ಮದ್ಯದ ಅಮಲಿನಲ್ಲಿ ಓರ್ವನನ್ನು ಕೊಲೆಗೈದಿರುವ ಘಟನೆ ಇಲ್ಲಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಸಾದರಮಂಗಲದ ನಿವಾಸಿ ವೀರೇಂದ್ರ ಕುಮಾರ್ ಕೊಲೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮನೋಹರ್ ವರ್ಮಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ವೀರೇಂದ್ರ ಕುಮಾರ್ ಮತ್ತು ಆರೋಪಿ ನೋಹರ್ ವರ್ಮಾ ಇಬ್ಬರು ಸ್ನೇಹಿತರಾಗಿದ್ದು, ವೃತ್ತಿಯಲ್ಲಿ ಪೇಂಟರ್ ಆಗಿದ್ದ. ಈ ಇಬ್ಬರು ಕಾಡುಗೋಡಿಯ ಸಾದರಮಂಗಲದಲ್ಲಿ ಕಾರ್ಮಿಕ ಶೆಡ್‍ನಲ್ಲಿ ನೆಲೆಸಿದ್ದರು. ಇಬ್ಬರು ಮದ್ಯವ್ಯಸನಿಗಳಾಗಿದ್ದು, ಶನಿವಾರ ರಾತ್ರಿ ಮದ್ಯ ಸೇವಿಸಿ  ಇಬ್ಬರ ನಡುವೆ ಗಲಾಟೆ ನಡೆದು, ಅವಾಚ್ಯ ಶಬ್ಧಗಳಿಂದ ಬೈದುಕೊಂಡಿದ್ದಾರೆ ಎನ್ನಲಾಗಿದೆ.

ಇದರಿಂದ ಕೋಪಗೊಂಡ ಮನೋಹರ್ ವರ್ಮಾ ಏಕಾಏಕಿ ವೀರೇಂದ್ರ ಕುಮಾರ್ ಮೇಲೆ ಹಲ್ಲೆ ನಡೆಸಿ ಕೊಲೆ ಮಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾಡುಗೋಡಿ ಪೊಲೀಸರು ಆರೋಪಿ ಮನೋಹರ್ ವರ್ಮಾನನ್ನು ಬಂಧಿಸಿದ್ದಾರೆ.

Similar News