ವಿಧಾನಸಭೆ ಕಾರ್ಯವೈಖರಿ-ನಡಾವಳಿಗಳ ಕುರಿತು ಆಸ್ಟ್ರೇಲಿಯಾ ವಿಧಾನಸಭೆಯ ಸಭಾಧ್ಯಕ್ಷರೊಂದಿಗೆ ಸ್ಪೀಕರ್ ಯು.ಟಿ.ಖಾದರ್ ಚರ್ಚೆ
Update: 2023-06-03 18:09 GMT
ಬೆಂಗಳೂರು, ಜೂ. 3: ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರೊಂದಿಗೆ ವೆಸ್ಟರ್ನ್ ಆಸ್ಟ್ರೇಲಿಯಾದ ವಿಧಾನಸಭೆಯ ಸಭಾಧ್ಯಕ್ಷರಾದ ಮಿಷೆಲ್ ರೋಬರ್ಟ್ಸ್ (Michelle Roberts) ಅವರ ನೇತೃತ್ವದ ಒಟ್ಟು 11 ಸದಸ್ಯರ ನಿಯೋಗವು ಸದನದ ಕಾರ್ಯವೈಖರಿ, ನಡಾವಳಿಗಳು, ನಿಯಮಾವಳಿಗಳ ಕುರಿತು ಪರಸ್ಪರ ಸಮಾಲೋಚನೆ ನಡೆಸಿತು.
ಶನಿವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯ ಸಭಾಂಗಣದಲ್ಲಿನ ಚಹಾ ಕೊಠಡಿಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ನಿಯೋಗಕ್ಕೆ ಸ್ಪೀಕರ್, ಸದನದ ಕಾರ್ಯವೈಖರಿ, ನಡಾವಳಿಗಳನ್ನು ವಿಸ್ತ ತವಾಗಿ ವಿವರಿಸಿದರು. ಇದೇ ವೇಳೆ ವೆಸ್ಟರ್ನ್ ಆಸ್ಟ್ರೇಲಿಯಾದ ಸ್ಪೀಕರ್ ಅವರು ತಮ್ಮ ಸದನದ ಕಾರ್ಯವೈಖರಿ, ನಡಾವಳಿಗಳನ್ನು ಈ ಸಂದರ್ಭದಲ್ಲಿ ತಿಳಿಸಿದರು.
ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ಸಚಿವಾಲಯದ ಅಧಿಕಾರಿಗಳು ಹಾಗೂ ಆಸ್ಟ್ರೇಲಿಯಾ ವಿಧಾನಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.