ಗಲ್ಫ್ ರಾಷ್ಟ್ರಗಳ ಮಾರುಕಟ್ಟೆಗೆ ಲಗ್ಗೆ ಇಟ್ಟ ‘ಹನ’
ಸೌದಿ ಬಳಿಕ ದುಬೈಯಲ್ಲೂ ನೈಸರ್ಗಿಕ ಮತ್ತು ಆರೋಗ್ಯಕರ ಸಾಫ್ಟ್ ಡ್ರಿಂಕ್ಸ್ ಲಭ್ಯ
ಬೆಂಗಳೂರು, ಜೂ.7: ಕರ್ನಾಟಕದ ಪ್ರಖ್ಯಾತ ಸಾಫ್ಟ್ ಡ್ರಿಂಕ್ ಬ್ರ್ಯಾಂಡ್ ‘ಸ್ವದೇಶಿ ಫುಡ್ ಆ್ಯಂಡ್ ಬೆವರೇಜಸ್’ ಕಂಪೆನಿಯ ‘ಹನ’ ನೈಸರ್ಗಿಕ ಮತ್ತು ಆರೋಗ್ಯಕರ ಸಾಫ್ಟ್ ಡ್ರಿಂಕ್ಸ್ ಶೀಘ್ರವೇ ಗಲ್ಫ್ ರಾಷ್ಟ್ರಗಳ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ ಎಂದು ಕಂಪೆನಿಯ ಪ್ರಕಟನೆ ತಿಳಿಸಿದೆ.
ಈಗಾಗಲೆ ಸೌದಿ ಅರೇಬಿಯಾದ ಪ್ರಮುಖ ಮಾರುಕಟ್ಟೆಗಳಿಗೆ ‘ಹನ’ ಸಾಫ್ಟ್ ಡ್ರಿಂಕ್ಸ್ ರಫ್ತು ಆಗುತ್ತಿದ್ದು, ಶೀಘ್ರ ದುಬೈಯ ಮಾರುಕಟ್ಟೆಗಳಲ್ಲಿ ಕೂಡ ‘ಹನ’ ಲಭ್ಯವಾಗಲಿದೆ.
2015ರಲ್ಲಿ ಬೆಂಗಳೂರಿನಲ್ಲಿ ‘ಸ್ವದೇಶಿ ಫುಡ್ ಆ್ಯಂಡ್ ಬೆವರೇಜಸ್’ ಕಂಪೆನಿಯು ಆರಂಭಿಸಿದ ‘ಹನ’ ನೈಸರ್ಗಿಕ ಮತ್ತು ಆರೋಗ್ಯಕರ ಸಾಫ್ಟ್ ಡ್ರಿಂಕ್ಸ್‌ನ ಪ್ಲಾಂಟ್ ಬೆಂಗಳೂರು ಮತ್ತು ಮೈಸೂರಿನಲ್ಲಿವೆ.
ಈಗ ವ್ಯಾಪಕ ಜನಪ್ರಿಯತೆ ಗಳಿಸುತ್ತಿರುವ ‘ಹನ’ ಬ್ರ್ಯಾಂಡ್ ಅನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಮುಂದಿನ ಹಂತದಲ್ಲಿ ಅಹ್ಮದಾಬಾದ್ ಮತ್ತು ಮಂಗಳೂರಿನಲ್ಲಿ ಉತ್ಪಾದನಾ ಪ್ಲಾಂಟ್ ತೆರೆಯಲು ಸಿದ್ಧತೆ ನಡೆಸಲಾಗಿದೆ.
‘ಹನ’ ಉತ್ಪನ್ನಗಳು ಆರೋಗ್ಯಕರ ಮತ್ತು ನೈಸರ್ಗಿಕವಾಗಿದೆ. ಅವುಗಳಲ್ಲಿ ಯಾವುದೇ ಅಲ್ಕೋಹಾಲಿಕ್ ಮಿಶ್ರಣವಿಲ್ಲ. ಸ್ವಾದಿಷ್ಟಕರವಾದ ‘ಹನ’ ಪಾನೀಯಗಳು ಕರ್ನಾಟಕವಲ್ಲದೆ ಕೇರಳ, ತಮಿಳ್ನಾಡು, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಒರಿಸ್ಸಾ ರಾಜ್ಯಗಳ ಬಹುತೇಕ ಪ್ರಮುಖ ನಗರಗಳ ಗ್ರಾಹಕರನ್ನು ಆಕರ್ಷಿಸಿವೆ.
ಕರಾವಳಿ ಕರ್ನಾಟಕದಲ್ಲಿ ಹನ ಈಗಾಗಲೇ ಮನೆಮಾತಾಗಿರುವ ಸಾಫ್ಟ್ ಡ್ರಿಂಕ್. ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪೆನಿಗಳ ಸಾಫ್ಟ್ ಡ್ರಿಂಕ್ ಗಳಿಗೆ ಪೈಪೋಟಿ ಒಡ್ಡುವಷ್ಟು ಜನಜನಿತವಾಗಿದೆ ‘ಹನ’.
170 ಮಿ.ಲೀ.ನಿಂದ 2 ಲೀ.ವರೆಗಿನ ‘ಹನ’ ಜಿಂಜರ್, ಲೆಮನ್, ಕೊಕಂ, ಮಿಂಟ್ ಲೆಮನ್, ಟ್ಯಾಮರಿಂಡ್, ಜೀರಾ, ಗ್ರೇಪ್, ಲೀಚ್ಚಿ, ಸ್ವೀಟ್ ಲಸ್ಸಿ, ಫಿಜ್ಹ್ ಜೀರಾ, ಮ್ಯಾಂಗೋ, ಗಾವಾ, ಬಟರ್ ಮಿಲ್ಕ್, ... ಹೀಗೆ ವಿವಿಧ ಬಗೆಯ 12 ಕ್ಕೂ ಹೆಚ್ಚು ಸ್ವಾದಿಷ್ಟ ಪೇಯಗಳು ‘ಹನ’ ಬ್ರ್ಯಾಂಡ್ ನಲ್ಲಿ ಲಭ್ಯ ಇವೆ.
ರೈತ ಮಿತ್ರ ಬ್ರ್ಯಾಂಡ್ ‘ಹನ’
‘ನಮ್ಮದು ರೈತ ಮಿತ್ರ ಸಂಸ್ಥೆಯಾಗಿದೆ. ವಿವಿಧ ಬಗೆಯ ಸ್ವಾದಿಷ್ಟ ಪೇಯಗಳ ತಯಾರಿಗೆ ಬೇಕಾದ ಲಿಂಬೆ, ಶುಂಠಿ, ಪುದಿನ, ದ್ರಾಕ್ಷಿ ಇತ್ಯಾದಿಗಳನ್ನು ನಾವು ನೇರವಾಗಿ ರೈತರಿಂದಲೇ ಖರೀದಿಸುತ್ತೇವೆ. ಯಾವ ಕಾರಣಕ್ಕೂ ಮಧ್ಯವರ್ತಿಗಳಿಗೆ ಅವಕಾಶ ನೀಡುವುದಿಲ್ಲ. ಆರ್ಥಿಕವಾಗಿ ಸಂಸ್ಥೆಯ ಬೆಳವಣಿಗೆಯ ಜೊತೆಗೆ ರೈತರು ಕೂಡ ಸ್ವಾವಲಂಬಿಯಾಗಬೇಕು ಎಂಬುದು ನಮ್ಮ ಅಭಿಲಾಶೆಯಾಗಿದೆ’ ಎಂದು ಕಂಪೆನಿಯ ಪ್ರವರ್ತಕರು ತಿಳಿಸಿದ್ದಾರೆ.
‘ನೈಸರ್ಗಿಕವಾದ ನಮ್ಮ ಪಾನೀಯಗಳಿಗೆ ಯಾವುದೇ ಕೃತಕ ಟೇಸ್ಟಿಂಗ್ ಪೌಡರ್ ಅಥವಾ ಅಮಲು ದ್ರವ್ಯ ಬೆರೆಸುವುದಿಲ್ಲ. ಜನರ ಆರೋಗ್ಯದ ಹಿತದೃಷ್ಟಿಯಿಂದ ನಿಸರ್ಗದತ್ತವಾದ ಸಾಮಗ್ರಿಗಳನ್ನು ಮಾತ್ರ ಬಳಸುತ್ತೇವೆ. ಈ ವರ್ಷದ ಫೆಬ್ರವರಿಯಲ್ಲಿ ದುಬೈಯಲ್ಲಿ ಸಾಫ್ಟ್ ಡ್ರಿಂಕ್ಸ್‌ನ ಪ್ರತಿಷ್ಠಿತ "ಗಲ್ಫ್ ಫುಡ್" ಮೇಳವೊಂದು ನಡೆದಿತ್ತು. ಅದರಲ್ಲಿ ಜಗತ್ತಿನ 155 ರಾಷ್ಟ್ರಗಳ ಪ್ರಮುಖ ಕಂಪೆನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಆ ಕಂಪೆನಿಗಳ ಪ್ರತಿನಿಧಿಗಳು ನಮ್ಮ ಪಾನೀಯಗಳ ರುಚಿ ಸವಿದು ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಜಗತ್ತಿನ ಹಲವು ದೇಶಗಳ ಮಾರುಕಟ್ಟೆಯಲ್ಲಿ ‘ಹನ’ ಉತ್ಪನ್ನಗಳನ್ನು ಪರಿಚಯಿಸಲು ಆಸಕ್ತಿ ತೋರಿ ಆಹ್ವಾನ ನೀಡಿದರು.
ಈ ನಿಟ್ಟಿನಲ್ಲಿ ನಾವು ಗಲ್ಫ್ ರಾಷ್ಟ್ರಗಳ ಮಾರುಕಟ್ಟೆ ಪ್ರವೇಶಿಸಲು ಮೊದಲ ಆದ್ಯತೆ ನೀಡಿದೆವು. ಈಗಾಗಲೆ ಸೌದಿ ಅರೇಬಿಯಾದ ಮಾರುಕಟ್ಟೆ ಪ್ರವೇಶಿಸಿದ್ದೇವೆ. ಅಲ್ಲಿಗೆ ಹೇರಳ ಪ್ರಮಾಣದಲ್ಲಿ ‘ಹನ’ ಉತ್ಪನ್ನಗಳು ರಫ್ತಾಗುತ್ತಿವೆ. ಎರಡು ವಾರಗಳಲ್ಲಿ ದುಬೈಯ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದೇವೆ. ಮುಂದಿನ ಎರಡು ತಿಂಗಳಲ್ಲಿ ಗಲ್ಫ್ ರಾಷ್ಟ್ರಗಳ ಎಲ್ಲಾ ಮಾರುಕಟ್ಟೆಗಳಲ್ಲಿ ‘ಹನ’ ಉತ್ಪನ್ನಗಳು ಗ್ರಾಹಕರ ಕೈಗೆ ಸಿಗುವಂತಹ ಯೋಜನೆ ರೂಪಿಸಿದ್ದೇವೆ’ ಎಂದು ‘ಸ್ವದೇಶಿ ಫುಡ್ ಆ್ಯಂಡ್ ಬೆವರೇಜಸ್’ನ ಪ್ರವರ್ತಕರು ತಿಳಿಸಿದ್ದಾರೆ.