ಬಿಡಿಎ ಅಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ನೇಮಕ

Update: 2023-06-08 05:41 GMT

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರನ್ನು ರಾಜ್ಯ ಸರಕಾರ ಗುರುವಾರ ನೇಮಕ ಮಾಡಿದೆ. 

ಈ ಹಿಂದೆ ಬಿಡಿಎ ಆಯುಕ್ತರಾಗಿ ಸೇವೆ ಸಲ್ಲಿಸಿರುವ ರಾಕೇಶ್ ಸಿಂಗ್ ಅವರನ್ನೇ ನೇಮಕ ಮಾಡುವ ಮೂಲಕ ಸರಕಾರ ಸ್ಥಳೀಯ ಶಾಸಕರ ಮಧ್ಯೆ ನಡೆದಿದ್ದ ಬಿಡಿಎ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ತೆರೆ ಎಳೆದಿದೆ. 

Similar News