ಪೊಲೀಸರು ವಿಭೂತಿ, ಕುಂಕುಮ ಹಚ್ಚಿಕೊಳ್ಳಬಾರದು ಎಂದಿಲ್ಲ: ಡಾ.ಜಿ.ಪರಮೇಶ್ವರ್ ಸ್ಪಷ್ಟನೆ
ತಪ್ಪು ಮಾಹಿತಿ ನೀಡಿದವರ ವಿರುದ್ಧ ಗೃಹ ಸಚಿವರಿಂದ ಕ್ರಮದ ಎಚ್ಚರಿಕೆ
ಬೆಂಗಳೂರು, ಜೂ.8: ಪೊಲೀಸರು ವಿಭೂತಿ, ಹಣೆಗೆ ಕುಂಕುಮ ಹಚ್ಚಿಕೊಳ್ಳಬಾರದು ಎಂದು ನಾನು ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಣೆ ನೀಡಿದ್ದು, ತಪ್ಪು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಬೊಟ್ಟು, ವಿಭೂತಿ ಇಟ್ಟುಕೊಳ್ಳಬಹುದು, ಅವರು ಯುನಿಫಾರ್ಮ್ ನಲ್ಲಿ ಕೆಲಸ ಮಾಡಬೇಕು. ಅವರಿಗೆ ಅವರದ್ದೇ ಆದ ಪೊಲೀಸ್ ರೂಲ್ಸ್ ಚೌಕಟ್ಟು ಇದೆ, ಅದರೊಳಗೆ ಏನೂ ಬೇಕಾದರೂ ಮಾಡಬಹುದು. ನಾನೂ ಏನನ್ನೂ ಸೂಚನೆ ನೀಡಿಲ್ಲ. ಸ್ಪಷ್ಟವಾಗಿ ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ಮಾಡಿ ಎಂದಷ್ಟೇ ಹೇಳಿದ್ದೇನೆ ಎಂದರು.
ಯಾರು ಈ ರೀತಿಯಾಗಿ ಸುದ್ದಿ ಬರೆದಿದ್ದಾರೋ ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನಾವು ಹೇಳದೆ ಇರುವುದನ್ನೆಲ್ಲ ಪತ್ರಿಕೆಯಲ್ಲಿ ಪ್ರಕಟನೆ ಮಾಡಿ ಗೊಂದಲ ಸೃಷ್ಟಿ ಮಾಡುವುದು ಶಾಂತಿ ಕಡದಲು ಕಾರಣವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಕೊನೆಗೂ ಉಪಸಭಾಪತಿ ಸ್ಥಾನ ಒಪ್ಪಿಕೊಂಡ ಶಾಸಕ ಪುಟ್ಟರಂಗಶೆಟ್ಟಿ