ಕಾಂಗ್ರೆಸ್ ಸರಕಾರದಿಂದ ದೌರ್ಜನ್ಯ ಆರೋಪ: ಕಾರ್ಯಕರ್ತರಿಗೆ ಸಹಾಯವಾಣಿ ಬಿಡುಗಡೆ ಮಾಡಿದ ಬಿಜೆಪಿ
ಬೆಂಗಳೂರು: ತಮ್ಮ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಸರಕಾರದಿಂದ ಕಾನೂನು ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ 24/7 ಸಹಾಯವಾಣಿಯನ್ನು ಆರಂಭಿಸಿದೆ.
ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕಾನೂನು ನೆರವು ಕೊಡಲು ಸಹಾಯವಾಣಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಕಾಂಗ್ರೆಸ್ ಸರಕಾರದ ದ್ವೇಷದ ರಾಜಕಾರಣ ಮುಂದುವರಿದಿದೆ. ಅದನ್ನು ಎದುರಿಸಲು ನಮ್ಮ ಕಾರ್ಯಕರ್ತರಿಗೆ ನೆರವಾಗುವ ದೃಷ್ಟಿಯಿಂದ ‘ಕಾನೂನು ಸಹಾಯವಾಣಿ’ (18003091907) ಉದ್ಘಾಟಿಸಲಾಗಿದೆ ಎಂದು ತಿಳಿಸಿದರು.
''ಹೋರಾಟದ ಮೂಲಕವೇ ಬಿಜೆಪಿ ಈ ಹಂತಕ್ಕೆ ಬಂದು ನಿಂತಿದೆ. ಯಾವುದೇ ಕಾರಣಕ್ಕೂ ನಾವು ವಿಶ್ವಾಸ ಕಳೆದುಕೊಳ್ಳಲ್ಲ. ಈ ಸರ್ಕಾರ, ಪೊಲೀಸ್ ಬಳಸಿ ದೌರ್ಜನ್ಯ ಎಸಗಿದರೆ ಸಹಾಯವಾಣಿ ನಂಬರ್ಗೆ ಕರೆ ಮಾಡಿ, ನಮ್ಮ ವಕೀಲರು ನಿಮ್ಮ ಸಹಾಯಕ್ಕೆ ಬರುತ್ತಾರೆ'' ಎಂದರು.
Live: ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಂಸದರಾದ ಶ್ರೀ @Tejasvi_Surya, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಶ್ರೀ ಯೋಗೇಂದ್ರ ಹೂಡಘಟ್ಟ ಮತ್ತು ಪ್ರಮುಖರಿಂದ ಕಾನೂನು ಸಹಾಯವಾಣಿ ಉದ್ಘಾಟನೆ.
— BJP Karnataka (@BJP4Karnataka) June 10, 2023
ಸ್ಥಳ : ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನ, ಬೆಂಗಳೂರು https://t.co/g5vJkXRbip