ಡಿಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರು ನಗರ ಪ್ರದಕ್ಷಿಣೆ; ಹೆಬ್ಬಾಳ ಮೇಲ್ಸೇತುವೆ ಬಳಿ ಕಾಮಗಾರಿ ಪರಿಶೀಲನೆ
Update: 2023-06-13 10:28 GMT
ಬೆಂಗಳೂರು: ಬೆಂಗಳೂರು ನಗರ ಪ್ರದಕ್ಷಿಣೆ ಮುಂದುವರಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಹೆಬ್ಬಾಳ ಮೇಲ್ಸೇತುವೆ ಬಳಿ ಕಾಮಗಾರಿಯನ್ನ ಪರಿಶೀಲಿಸಿದ್ದಾರೆ.
ಕಾಮಗಾರಿಗಳ ಪರಿಶೀಲನೆ ನಡೆಸಿ ಸಂಚಾರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ವಿಮಾನ ನಿಲ್ದಾಣ, ಹೈದರಾಬಾದ್ ಹಾಗೂ ಐಟಿ ಹಬ್ ಗಳನ್ನು ಸಂಪರ್ಕಿಸುವ ಹೆಬ್ಬಾಳ ಮೇಲ್ಸೇತುವೆ ಅಗಲೀಕರಣಕ್ಕೆ ಸಾಕಷ್ಟು ಬೇಡಿಕೆಗಳು ಕೇಳಿಬಂದಿದ್ದು ಉದ್ದೇಶಿತ ಯೋಜನೆಯ ನೀಲನಕ್ಷೆಗಳನ್ನು ಈ ವೇಳೆ ವೀಕ್ಷಿಸಿ, ಮಾಹಿತಿ ಪಡೆದುಕೊಂಡರು.
ಇದಕ್ಕೂ ಮುನ್ನ ಬಿಡಿಎ ಕಚೇರಿಯಲ್ಲಿ ಬಿಡಿಎ ಆಯುಕ್ತರು, ಅಧ್ಯಕ್ಷರು ಅಧಿಕಾರಿಗಳು ಹಾಗೂ ಬಿಬಿಎಂಪಿ ಆಯುಕ್ತರ ಜೊತೆ ಸಭೆ ನಡೆಸಿದ್ದರು.