ಕೇಂದ್ರ ಸರಕಾರ ಕಾಂಗ್ರೆಸ್ ನ ಅತ್ತೆ ಮನೆ ಅಲ್ಲ: ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು: 'ಕೇಂದ್ರ ಸರಕಾರ ಕಾಂಗ್ರೆಸ್ ಅತ್ತೆ ಮನೆ ಅಲ್ಲ. ನಾಳೆ ಕರ್ನಾಟಕವನ್ನು ಮಾರುತ್ತೇವೆ ಅಂದ್ರೆ ಕೇಂದ್ರ ಸರಕಾರ ಅದಕ್ಕೂ ಯೆಸ್ ಅನ್ನಬೇಕಾ?' ಎಂದು ಮಾಜಿ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಸಿದ್ದರಾಮಯ್ಯನವರೇ ಅಂದು ಕೇಂದ್ರ ಸರ್ಕಾರ ಕೊಟ್ಟ ಅನ್ನಭಾಗ್ಯ ಅಕ್ಕಿಗೆ ನಿಮ್ಮ ಸೀಲ್ ಹಾಕಿದ್ರಲ್ಲಾ ನಾಚಿಕೆ ಅಗಲ್ವಾ? ಒಂದು ವರ್ಷದಲ್ಲಿ ಈ ಸರ್ಕಾರ ದಿವಾಳಿ ಎದ್ದು ಹೋಗುತ್ತದೆ. ಜನ ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ವಿದ್ಯುತ್ ದರದಲ್ಲಿ ಮೋಸಗಾರರು ಯಾರು ಎಂದು ಜನಕ್ಕೆ ಗೊತ್ತಾಗಬೇಕು' ಎಂದಿ ಕಿಡಿಕಾರಿದರು.
''ಕಾಂಗ್ರೆಸ್‌ಗೆ ಮಾನ ಮರ್ಯಾದೆ ಇದ್ರೆ ಯೋಚನೆ ಮಾಡಿ ಗ್ಯಾರೆಂಟಿ ಘೋಷಣೆ ಮಾಡಬೇಕಿತ್ತು. ಓಟಿಗಾಗಿ ಏನೇನ್ ಮಾಡಬಹುದು ಎಂಬುದನ್ನ ಮಾಡಿ ತೋರಿಸಿದೆ. ಗ್ಯಾರೆಂಟಿ ಬಗೆಗಿನ ಜನಾಕ್ರೋಶದ ದಿಕ್ಕು ತಪ್ಪಿಸಲು ಕಾಯ್ದೆಗಳು ವಾಪಾಸ್ ಪಡೆದಿದ್ದಾರೆ. ಎಲ್ಲೆಡೆ ಪ್ರತಿಭಟನೆ, ಟೀಕೆಗಳು ವ್ಯಕ್ತವಾಗುತ್ತಿವೆ'' ಎಂದು ಅವರು ತಿಳಿಸಿದರು.