ವಿದ್ಯಾರ್ಥಿನಿಯ ನಗ್ನ ದೃಶ್ಯ ಹರಿಬಿಟ್ಟ ABVP ಮುಖಂಡನ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ: ನೈಜ ಹೋರಾಟಗಾರರ ವೇದಿಕೆ

ಶಿವಮೊಗ್ಗ ಎಸ್ಪಿಗೆ ಮನವಿ

Update: 2023-06-17 17:38 GMT

ಬೆಂಗಳೂರು, ಜೂ.17: ವಿದ್ಯಾರ್ಥಿನಿಯ ನಗ್ನಚಿತ್ರಗಳ ದೃಶ್ಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಶಿವಮೊಗ್ಗ ಎಸ್ಪಿಗೆ ನೈಜ ಹೋರಾಟಗಾರರ ವೇದಿಕೆ ಮನವಿ ಮಾಡಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಲೇಜುಯೊಂದರ ವಿದ್ಯಾರ್ಥಿನಿಯ ನಗ್ನ ಚಿತ್ರ, ದೃಶ್ಯಗಳ ವಿಡಿಯೋ ಮಾಡಿ ಹರಿ ಬಿಟ್ಟಿರುವ ವ್ಯಕ್ತಿಯು ಬಿಜೆಪಿ ಪಕ್ಷದ ಎಬಿವಿಪಿ ಸಂಘಟನೆಯ ಮುಖಂಡ ಎಂದು ಹೇಳಲಾಗುತ್ತಿದೆ. ಆತ ಮುಗ್ಧ ವಿದ್ಯಾರ್ಥಿನಿಯನ್ನು ಪುಸಲಾಯಿಸಿ, ಲೈಂಗಿಕವಾಗಿ ತನ್ನ ಕಾಮತೃಷ್ಟ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾನೆ. ಆತನ ಮೇಲೆ ಪೋಕ್ಸೋ ಕಾಯ್ದೆಯನ್ನು ಹಾಕಬೇಕು ಎಂದು ವೇದಿಕೆ ಒತ್ತಾಯಿಸಿದೆ.

ಆತನ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳ ಮುಖಾಂತರ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿ ಆರೋಪಿಯನ್ನು ತಕ್ಷಣ ಬಂಧಿಸಿ ವಿಚಾರಣೆಗೆ ಒಳಪಡಿಸಿ   ಕಾನೂನು ಕ್ರಮಗಳನ್ನು ಜರುಗಿಸಿ ಜೈಲಿ ಗಟ್ಟುವ ಕೆಲಸವನ್ನು ತ್ವರಿತವಾಗಿ ಮಾಡಬೇಕು ವೇದಿಕೆ ಆಗ್ರಹಿಸಿದೆ.

Similar News