ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ; ಇದು ನನ್ನ 'ಗ್ಯಾರಂಟಿ' ಎಂದ ಆರ್. ಅಶೋಕ್

Update: 2023-06-18 12:28 GMT

ಬೆಂಗಳೂರು: 'ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ಒಳ ಜಗಳ ಹೊರ ಬರುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ತರ ನಾನು ಗ್ಯಾರಂಟಿಯಾಗಿ ಹೇಳುತ್ತೇನೆ, ಸಿದ್ದರಾಮಯ್ಯ ಅಧಿಕಾರವನ್ನು ಬಿಟ್ಟುಕೊಡಲ್ಲ' ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರೆ. 

ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಗಿಂತ  ಸಿದ್ದರಾಮಯ್ಯ ಪವರ್ ಫುಲ್. ಅಧಿಕಾರ ಹಂಚಿಕೆ ಒಂದು ನಾಟಕ ಅಷ್ಟೇ. ಮುಖ್ಯಮಂತ್ರಿ ಆಗೋದು ಡಿಕೆ ಶಿವಕುಮಾರ್ ಅವರ ಒಂದು ಕನಸು ಅಷ್ಟೇ' ಎಂದು ಹೇಳಿದರು.

'ಸಂಸದ ಡಿ.ಕೆ.ಸುರೇಶ್ ಗೆ ಡಿ.ಕೆ.ಶಿವಕುಮಾರ್​ ಮುಖ್ಯಮಂತ್ರಿ ಆಗಲ್ಲವೆಂದು ಗೊತ್ತಾಗಿದೆ. ಅದಕ್ಕಾಗಿಯೇ ಅವರು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಪಾಪ ಡಿ.ಕೆ.ಸುರೇಶ್ ಬಗ್ಗೆ ನನಗೆ ಅನುಕಂಪ ಇದೆ'  ಎಂದು ಹೇಳಿದರು. 

Similar News