ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ | ಭರತ್ ಭೂಷಣ್ ಕುಟುಂಬಕ್ಕೆ ಎಂಇಐ ಸಂಸ್ಥೆಯಿಂದ 1.ಲಕ್ಷ ರೂ.ಆರ್ಥಿಕ ನೆರವು
ಬೆಂಗಳೂರು : ಶನಿವಾರ ನಗರದಲ್ಲಿರುವ ಭರತ್ ಭೂಷಣ್ ಅವರ ನಿವಾಸಕ್ಕೆ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಅಧ್ಯಕ್ಷ ಎಸ್.ಮನೋಹರ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಡಿ.ಪದ್ಮಾವತಿ ಹಾಗೂ ಅಧಿಕಾರಿಗಳು ತೆರಳಿ ಭರತ್ ಭೂಷಣ ಅವರ ಪತ್ನಿ ಸುಜಾತಾ ಅವರಿಗೆ 1ಲಕ್ಷ ರೂ.ಆರ್ಥಿಕ ಸಹಾಯವನ್ನು ಸಂಸ್ಥೆಯ ವತಿಯಿಂದ ನೀಡಲಾಯಿತು.
ಈ ವೇಳೆ ಮಾತನಾಡಿದ ಎಂಇಐ ಅಧ್ಯಕ್ಷ ಎಸ್.ಮನೋಹರ್, ಜಮ್ಮು-ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಡೆದ ಭಯೋತ್ಪಾದಕರ ದಾಳಿ ಅತ್ಯಂತ ಹೇಯ ಕೃತ್ಯವಾಗಿದ್ದು, ಅದನ್ನು ಖಂಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉಗ್ರಗಾಮಿಗಳನ್ನು ಸದೆ ಬಡಿಯಬೇಕು ಎಂದು ಆಗ್ರಹಿಸಿದರು.
ಸುಜಾತಾ ಅವರು ಆ ಸಂದರ್ಭದಲ್ಲಿ ಅತ್ಯಂತ ಧೈರ್ಯದಿಂದ ಉಗ್ರಗಾಮಿಗಳ ಬೆದರಿಕೆಯನ್ನು ದಿಟ್ಟತನದಿಂದ ಎದುರಿಸಿ ಮಗುವನ್ನು ಅತ್ಯಂತ ಸುರಕ್ಷತೆಯಿಂದ ಕರೆ ತಂದಿರುವ ಅವರ ಧೈರ್ಯವನ್ನು ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಮುಗ್ಧರ ಆತ್ಮಕ್ಕೆ ಶಾಂತಿಯನ್ನು ಕೋರಿದರು.
ಈ ಸಂದರ್ಭದಲ್ಲಿ ಎಂಇಐ ಅಧಿಕಾರಿಗಳಾದ ಶರಣಪ್ಪ, ತಿಮ್ಮಣ್ಣ ಸಂತೋಷ್ ಕೀರ್ತಿ, ರೇಖಾ ಮತ್ತಿತರರು ಉಪಸ್ಥಿತರಿದ್ದರು.