ಚಿನ್ನಾಭರಣ ವಂಚನೆ ಪ್ರಕರಣ | ಐಶ್ವರ್ಯಾ ಗೌಡ 14 ದಿನ ಈಡಿ ಕಸ್ಟಡಿಗೆ

Update: 2025-04-26 22:37 IST
ಚಿನ್ನಾಭರಣ ವಂಚನೆ ಪ್ರಕರಣ | ಐಶ್ವರ್ಯಾ ಗೌಡ 14 ದಿನ ಈಡಿ ಕಸ್ಟಡಿಗೆ
  • whatsapp icon

ಬೆಂಗಳೂರು: ಚಿನ್ನಾಭರಣ ವಂಚನೆ ಆರೋಪ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‍ಎ) ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶಾನಾಲಯವು, ಐಶ್ವರ್ಯಾ ಗೌಡ ಅನ್ನು ಬಂಧಿಸಿ, 14 ದಿನಗಳ ಕಸ್ಟಡಿಗೆ ತೆಗೆದುಕೊಂಡಿದೆ.

ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಸೇರಿದಂತೆ 14 ಕಡೆಗಳಲ್ಲಿ ಈಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದರು. ಈ ವೇಳೆ ವಂಚನೆ ಎಸಗಿರುವ ಸಂಬಂಧ ಪೂರಕ ದಾಖಲಾತಿಗಳು, ಡಿಜಿಟಲ್ ಸಾಧನಗಳು ಐಶ್ವರ್ಯಾ ಗೌಡ ಅವರ ಮನೆಯಲ್ಲಿ ಪತ್ತೆಯಾಗಿದ್ದವು ಎನ್ನಲಾಗಿದೆ.

ಈ ಬಗ್ಗೆ ಪ್ರಶ್ನಿಸಿದಕ್ಕೆ ಸೂಕ್ತ ಸಮಜಾಯಿಷಿ ನೀಡದ ಕಾರಣ ಐಶ್ವರ್ಯಾ ಅವರನ್ನು ಬಂಧಿಸಿ ನಗರದ ವಿಶೇಷ ಆರ್ಥಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News