ಪಹಲ್ಗಾಮ್ ದಾಳಿ: ಮೃತರ ಕುಟುಂಬಕ್ಕೆ ಎನ್‌ಎಸ್‌ಇಯಿಂದ ತಲಾ 4 ಲಕ್ಷ ರೂ. ನೆರವು
Update: 2025-04-25 23:23 IST
PC : NDTV
ಬೆಂಗಳೂರು : ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ)ದ ವತಿಯಿಂದ ತಲಾ 4 ಲಕ್ಷ ರೂ. ನೆರವು ನೀಡಲಾಗುವುದು ಎಂದು ಪ್ರಕಟಿಸಿದೆ.
ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಬೆಂಬಲವಾಗಿ ಒಟ್ಟು 1 ಕೋಟಿ ರೂ. ಗಳನ್ನು ನೀಡಲಾಗುವುದು. ಇದು ನಮ್ಮ ದೇಶಕ್ಕೆ ಸಾಮೂಹಿಕ ಶೋಕದ ಕ್ಷಣ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತ ಕುಟುಂಬಗಳೊಂದಿಗಿವೆ. ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲ ನೀಡಬೇಕೆಂದು ನಾವು ಆಶಿಸುತ್ತೇವೆ ಎಂದು ಎನ್‌ಎಸ್‌ಇ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಶಿಶ್‌ಕುಮಾರ್ ಚೌಹಾಣ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ