ಬೆಂಗಳೂರು | ಸಾವರ್ಕರ್ ನಾಮಫಲಕಕ್ಕೆ ಮಸಿ ಬಳಿದ NSUI ; ಭಗತ್ ಸಿಂಗ್ ನಾಮಫಲಕ ಅಳವಡಿಸಲು ಒತ್ತಾಯ

Update: 2024-05-28 15:21 GMT

ಬೆಂಗಳೂರು: ಇಲ್ಲಿನ ಯಲಹಂಕ ಮೇಲ್ಸೇತುವಗೆ ಅಳವಡಿಸಲಾಗಿದ್ದ ಸಾವರ್ಕರ್ ನಾಮಫಲಕವನ್ನು ತೆಗೆದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ನಾಮಫಲಕವನ್ನು ಅಳವಡಿಸಬೇಕು ಎಂದು ಎನ್‍ಎಸ್‍ಯುಐ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಸೋಮವಾರ ಯಲಹಂಕದಲ್ಲಿರುವ ಮೇಲ್ಸೇತುವಗೆ ಅಳವಡಿಸಲಾಗಿದ್ದ ವೀರ ಸಾವರ್ಕರ್ ನಾಮಫಲಕಕ್ಕೆ ಮಸಿ ಬಳಿದು, ಭಗತ್ ಸಿಂಗ್ ಹೆಸರಿನ ಬ್ಯಾನರ್ ಹಾಕಿದ ಎನ್‍ಎಸ್‍ಯುಐ ಕಾರ್ಯಕರ್ತರು, ‘ಇತ್ತೀಚೆಗೆ ದೇಶದಲ್ಲಿ  ಸಾವರ್ಕರ್ ಗೆ ಸಿಗುತ್ತಿರುವ ಗೌರವ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್‍ಗೆ ಸಿಗುತ್ತಿಲ್ಲ. ಮೇಲ್ಸುತುವೆಗೆ ಸಾವರ್ಕರ್ ಸೇತುವೆ ಬದಲು ಭಗತ್ ಸಿಂಗ್ ಹೆಸರಿಡಬೇಕು’ ಎಂದು ಹೇಳಿದರು.

ಈ ಹಿಂದೆ ಸೇತುವೆಗೆ ವೀರ ಸಾವರ್ಕರ್ ಹೆಸರಿಟ್ಟಾಗಲೂ ವಿವಾದವಾಗಿತ್ತು. ಆದರೆ ಅಂದಿನ ಸರಕಾರವು ಆರೆಸ್ಸೆಸ್ ಅನ್ನು ಮೆಚ್ಚಿಸಲು ಮೇಲ್ಸೇತುವೆಗೆ ವೀರ ಸಾವರ್ಕರ್ ಎಂದು ಹೆಸರನ್ನು ಇಟ್ಟಿತು. ಇದು ಯಲಹಂಕದಲ್ಲಿ ವಿವಾದವನ್ನು ಸೃಷ್ಟಿಸಿದೆ. ಹೀಗಾಗಿ ಕೂಡಲೆ ಸಾವರ್ಕರ್ ಹೆಸರನ್ನು ತೆಗೆದು ಭಗತ್ ಸಿಂಗ್ ಹೆಸರನ್ನು ಅಳವಡಿಸಬೇಕು ಎಂದರು.

ಎನ್‍ಎಸ್‍ಯುಐ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೋಲಿಸರು: ಸಾವರ್ಕರ್ ಹೆಸರು ಬದಲಿಸಿ, ಯಲಹಂಕ ಫ್ಲೈ ಓವರ್‍ಗೆ ಭಗತ್ ಸಿಂಗ್ ಹೆಸರಿಡುವಂತೆ ಒತ್ತಾಯಿಸಿದ ಎನ್‍ಎಸ್‍ಯುಐ ಕಾರ್ಯಕರ್ತರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಧಂಉ ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News