ಕಾಶ್ಮೀರದಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದ 174 ಕನ್ನಡಿಗರು

Update: 2025-04-24 14:49 IST
ಕಾಶ್ಮೀರದಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದ 174 ಕನ್ನಡಿಗರು
  • whatsapp icon

ಬೆಂಗಳೂರು: ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 174 ಕನ್ನಡಿಗ ಪ್ರವಾಸಿಗರು ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಸುರಕ್ಷಿತವಾಗಿ ಹುಟ್ಟೂರು ತಲುಪಿದ್ದಾರೆ.

ಶ್ರೀನಗರದಿಂದ 174 ಕನ್ನಡಿಗರನ್ನು ಹೊತ್ತ ವಿಶೇಷ ವಿಮಾನವು ಮಧ್ಯಾಹ್ನ 1:30ರ ವೇಳೆಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯರ ಸೂಚನೆ ಮೇರೆಗೆ ಬುಧವಾರ ಬೆಳಗಿನ ಜಾವ 3 ಗಂಟೆಗೆ ಜಮ್ಮು ಕಾಶ್ಮೀರಕ್ಕೆ ತೆರಳಿದ್ದ ಸಚಿವ ಸಂತೋಷ್ ಲಾಡ್ ಇದೀಗ ಅಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗ ಪ್ರವಾಸಿಗರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದ ಮತ್ತು ಹಿರಿಯ ಪೊಲೀಸ್ ಅಧಿಕಾರಿ ಆರ್.ಚೇತನ್ ಅವರಿದ್ದ ರಾಜ್ಯ ತಂಡವು, ಕರ್ನಾಟಕದ 174 ಪ್ರವಾಸಿಗರನ್ನು ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿತ್ತು. ಪ್ರವಾಸಿಗರ ಜತೆಯಲ್ಲಿ ಸಂತೋಷ್ ಲಾಡ್ ಮತ್ತು ರಾಜ್ಯದ ಅಧಿಕಾರಿಗಳ ತಂಡವೂ ಅದೇ ವಿಮಾನದಲ್ಲಿ ಆಗಮಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News