ಸಿಎಂ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿದ್ದ 30 ಮಂದಿಯ ನೇಮಕಾತಿ ರದ್ದು
Update: 2025-04-01 22:43 IST
ಬೆಂಗಳೂರು: ಸಿಎಂ ಸಚಿವಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕರು, ಕಿರಿಯ ಸಹಾಯಕರು, ದಲಾಯತ್ ಸೇರಿದಂತೆ 30 ಮಂದಿಯ ಅವಶ್ಯಕತೆ ಇಲ್ಲದ ಕಾರಣ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ಗುತ್ತಿಗೆ ಆಧಾರದ ನೇಮಕಾತಿ ರದ್ದುಗೊಳಿಸಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.
ಸಹಾಯಕರಾಗಿದ್ದ ವಿ.ಪದ್ಮಬಾಯಿ, ಮಧುಸೂದನ್ ಎನ್., ಕುಮಾರಿ ಅನುಷಾ ಸಿ.ಪಿ., ಕೆ.ವಿ. ಮಮತಾ ಸೇರಿದಂತೆ ಮೂವತ್ತು ಮಂದಿಯನ್ನು ತಕ್ಷಣದಿಂದಲೆ ಜಾರಿಗೆ ಬರುವಂತೆ ಎ.1ರ ಮಧ್ಯಾಹ್ನದಿಂದಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಬಿ.ಡಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.