ಬೆಂಗಳೂರು | ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಲಾರಿ
Update: 2025-04-17 23:24 IST

ಸಾಂದರ್ಭಿಕ ಚಿತ್ರ
ಬೆಂಗಳೂರು : ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಚಲಿಸುತ್ತಿದ್ದ ಲಾರಿ ಹೊತ್ತಿ ಉರಿದ ಘಟನೆ ಇಲ್ಲಿನ ಪೀಣ್ಯ ಮೇಲ್ಸೆತುವೆ ಬಳಿ ಗುರುವಾರ ನಡೆದಿದೆ.
ಪೀಣ್ಯ ಮೇಲ್ಸೆತುವೆ ಮೇಲೆ ಚಲಿಸುತ್ತಿದ್ದ ಲಾರಿಯಲ್ಲಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಾಹಿತಿ ಆಧರಿಸಿ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಈ ಘಟನೆಯಿಂದಾಗಿ ಸುರಕ್ಷತಾ ದೃಷ್ಟಿಯಿಂದ ಯಶವಂತಪುರ ಸಂಚಾರ ಪೆÇಲೀಸರು ಮೇಲ್ಸೆತುವೆ ಮೇಲೆ ವಾಹನ ಸಂಚಾರ ತಾತ್ಕಾಲಿಕವಾಗಿ ನಿಷೇಧಿಸಿದ್ದರಿಂದ ಲಕ್ಷಾಂತರ ವಾಹನಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡವು.
ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಟ್ರಾಫಿಕ್ ಪೊಲೀಸರು ನಗರದ ಕಡೆ ಬರುವ ಮಾರ್ಗವನ್ನು ಬಂದ್ ಮಾಡಿದ್ದರಿಂದ ಅನಿವಾರ್ಯವಾಗಿ ಮೇಲ್ಸೆತುವೆ ಕೆಳ ಮಾರ್ಗದಲ್ಲಿ ಅನುವು ಮಾಡಿಕೊಟ್ಟರು.