ಬನ್ನೇರುಘಟ್ಟ ಜೈವಿಕ ಉದ್ಯಾನ: ಅನಧಿಕೃತ ವೆಬ್‌ಸೈಟ್ ಬಗ್ಗೆ ಎಚ್ಚರ

Update: 2025-04-30 01:10 IST
ಬನ್ನೇರುಘಟ್ಟ ಜೈವಿಕ ಉದ್ಯಾನ: ಅನಧಿಕೃತ ವೆಬ್‌ಸೈಟ್ ಬಗ್ಗೆ ಎಚ್ಚರ
  • whatsapp icon

ಆನೇಕಲ್/ಬೆಂಗಳೂರು : ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿ, ಝೂ ಮತ್ತು ಚಿಟ್ಟೆ ಉದ್ಯಾನವನಕ್ಕೆ ಟಿಕೆಟ್ ಬುಕಿಂಗ್ ಸೇವೆಗಳನ್ನು ನೀಡುವುದಾಗಿ ಅನಧಿಕೃತ ವೆಬ್‌ಸೈಟ್ ತಯಾರಿಸಿರುವುದು ಕಂಡು ಬಂದಿದ್ದು, ಅಧಿಕೃತ ವೆಬ್‌ಸೈಟ್ www.bannerughatta-biopark.org ಇದಾಗಿದ್ದು, ಈ ವೆಬ್‌ಸೈಟ್ ಮೂಲಕವೇ ಸಾರ್ವಜನಿಕರು ಆನ್‌ಲೈನ್ ಟಿಕೆಟ್ ಕಾಯ್ದಿರಿಸಿಕೊಳ್ಳಬೇಕು ಎಂದು ಕೋರಲಾಗಿದೆ.

ಅನಧಿಕೃತ ಅಥವಾ ನಕಲಿ ವೆಬ್‌ಸೈಟ್‌ಗಳ ಮೂಲಕ ಟಿಕೆಟ್ ಬುಕಿಂಗ್ ಮಾಡುವುದರಿಂದ ಹಣಕಾಸಿನ ನಷ್ಟ ವೈಯಕ್ತಿಕ ಡೇಟಾ ಕಳ್ಳತನ ಹಾಗೂ ಇನ್ನಿತರ ಸಮಸ್ಯೆಗಳು ಉಂಟಾಗಬಹುದು. ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಅನಧಿಕೃತ ವೆಬ್‌ಸೈಟ್‌ನ ನಿರ್ವಾಹಕರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಉದ್ಯಾನವನದ ಆಡಳಿತ ಮಂಡಳಿಯು ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕರಾಗಿರಲು ತಿಳಿಸಲಾಗಿದೆ. ಯಾವುದೇ ಪಾವತಿಗಳನ್ನು ಮಾಡುವ ಮೊದಲು ಯಾವಾಗಲೂ ವೆಬ್‌ಸೈಟ್ ಅನ್ನು ಎರಡು ಬಾರಿ ಪರಿಶೀಲಿಸಿ. ಯಾವುದೇ ಅನುಮಾನಾಸ್ಪದ ವೆಬ್‌ಸೈಟ್‌ಗಳು ಅಥವಾ ಬುಕಿಂಗ್ ಲಿಂಕ್‌ಗಳು ಕಂಡುಬಂದಲ್ಲಿ ತಕ್ಷಣವೇ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News