ದಲಿತರ ಮೇಲೆ ವಾಗ್ದಾಳಿ ನಡೆಸುವುದು ಬಿಜೆಪಿಯ ತಂತ್ರ : ರಮೇಶ್ ಬಾಬು

Update: 2024-03-26 13:56 GMT

ಬೆಂಗಳೂರು: ಶಿವರಾಜ ತಂಗಡಗಿ ದಲಿತ ಸಮುದಾಯದ ವ್ಯಕ್ತಿ. ಉದ್ದೇಶಪೂರ್ವಕವಾಗಿ ದಲಿತರ ಮೇಲೆ ವಾಗ್ದಾಳಿ ನಡೆಸುವುದು ಬಿಜೆಪಿಯ ತಂತ್ರವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ತಿಳಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆಯಲ್ಲಿ ಬಿಜೆಪಿಯವರು ಸಂಸ್ಕೃತಿಯನ್ನು ತೋರಿಸಿದ್ದಾರೆ. ಅಸಂವಿಧಾನಿಕ ಪದ ಬಳಸಿರುವ ಸಿ.ಟಿ.ರವಿ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದೇವೆ. ಸಿ.ಟಿ.ರವಿ ಅವರು ಬಳಸಿರುವ ಪದ ಸಂಘ ಪರಿವಾರದಿಂದ ಬಂದಿರುವ ಬಳುವಳಿ ಎಂದರು.

ತಂಗಡಗಿ ಅವರು ಬಿಜೆಪಿಯ ವೈಫಲ್ಯಗಳನ್ನು ಪ್ರಶ್ನಿಸುತ್ತಿರುವ ಕಾರಣ ಅವರ ಮೇಲೆ ದಾಳಿ ಮಾಡಲಾಗುತ್ತಿದೆ. ಇದು ಬಿಜೆಪಿಯ ಷಡ್ಯಂತ್ರ. ತಂಗಡಗಿಯವರಿಗೆ ಯಾರು ಕರೆ ಮಾಡಿದ್ದಾರೆ. ಕೇಶವ ಕೃಪದಲ್ಲಿ ಏಕೆ ಸಭೆ ನಡೆಸಿದರು, ಬಿಜೆಪಿ ಕಚೇರಿಯಲ್ಲಿ ಯಾರು, ಯಾರು ಇದರ ಬಗ್ಗೆ ಸಭೆ ನಡೆಸಿದ್ದಾರೆ ಎನ್ನುವ ಮಾಹಿತಿ ನಮ್ಮ ಬಳಿ ಇದೆ. ತಂಗಡಗಿ ಅವರನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲು ಆಗುವುದಿಲ್ಲ ಎಂದು ರಮೇಶ್ ಬಾಬು ಹೇಳಿದರು.

ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿದರು ನಮ್ಮ ಭಾಷೆಯ ಅಭಿವೃದ್ಧಿಗೆ ನಯಾ ಪೈಸೆ ನೀಡದ ಕೇಂದ್ರದ ವಿರುದ್ಧ ತಂಗಡಗಿ ಅವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ರಮೇಶ್ ಬಾಬು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News