ಅತ್ಯುತ್ತಮ‌ ಚುನಾವಣಾ ಪದ್ದತಿ ಅಳವಡಿಕೆ | ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ ಕಲಬುರಗಿ ಡಿ.ಸಿ. ಫೌಝಿಯಾ ತರನ್ನುಮ್

Update: 2025-01-25 14:01 IST
ಅತ್ಯುತ್ತಮ‌ ಚುನಾವಣಾ ಪದ್ದತಿ ಅಳವಡಿಕೆ | ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ ಕಲಬುರಗಿ ಡಿ.ಸಿ. ಫೌಝಿಯಾ ತರನ್ನುಮ್
  • whatsapp icon

ಕಲಬುರಗಿ : 2024-25ನೇ ಸಾಲಿನ ಅತ್ಯುತ್ತಮ ಚುನಾವಣಾ ಪದ್ದತಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದಿದ್ದಕ್ಕಾಗಿ ಭಾರತ ಚುನಾವಣಾ ಆಯೋಗವು ಘೋಷಿಸಿದ ಪ್ರಶಸ್ತಿಯನ್ನು ಹೊಸದಿಲ್ಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರಿಗೆ ಪ್ರದಾನ ಮಾಡಿದರು.

ಭಾರತ ಚುನಾವಣಾ ಆಯೋಗವು ಇತ್ತೀಚೆಗೆ ಜನರಲ್ ಕೆಟಗರಿ ವಿಭಾಗದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರಿಗೆ ಪ್ರಶಸ್ತಿ ಘೋಷಿಸಿತ್ತು. 

ಈ ಹಿನ್ನೆಲೆಯಲ್ಲಿ ಇಂದು (ಶನಿವಾರ) ಹೊಸದಿಲ್ಲಿಯಲ್ಲಿ ಮಾಣಿಕ್ ಶಾ ಸೆಂಟರ್‌ನಲ್ಲಿ ನಡೆದಿರುವ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು, ಜಿಲ್ಲಾಧಿಕಾರಿಗಳಿಗೆ ಪ್ರಶಸ್ತಿ ನೀಡಿ, ಸತ್ಕರಿಸಿದರು.

ಜನರಲ್ ಕೆಟಗರಿಯಲ್ಲಿ 11, ಸ್ಪೆಷಲ್ ಕೆಟಗರಿಯಲ್ಲಿ 3, ಅತ್ಯುತ್ತಮ ನಿರ್ವಹಣೆಗೆ 3 ರಾಜ್ಯದ ಸಿ.ಇ.ಓ ಗಳಿಗೆ ಹಾಗೂ ಅತ್ಯುತ್ತಮ ಇಲಾಖೆಗಳ ಭಾಗದಲ್ಲಿ ಕೇಂದ್ರದ ಎನ್.ಐ.ಸಿ, ರೈಲ್ವೆ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಗೆ ಇ.ಸಿ.ಐ ಪ್ರಶಸ್ತಿ ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News