ಬೆಂಗಳೂರಿನಲ್ಲಿ ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್ 2ರ ಶುಭಾರಂಭ

Update: 2025-04-28 12:49 IST
ಬೆಂಗಳೂರಿನಲ್ಲಿ ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್ 2ರ ಶುಭಾರಂಭ
  • whatsapp icon

ಬೆಂಗಳೂರು : ಜೆಟ್‌ಸಿಂಥೆಸಿಸ್ ಸಂಸ್ಥೆಯು ಆಯೋಜಿಸಿರುವ ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ (ಜಿಇಪಿಎಲ್) ಸೀಸನ್-2 ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭಗೊಂಡಿದೆ. ಇದೇ ಮೊದಲ ಬಾರಿಗೆ ಈ ಲೀಗ್ ನ ರಾಷ್ಟ್ರೀಯ ಉದ್ಘಾಟನಾ ಕಾರ್ಯಕ್ರಮ ಗಾರ್ಡನ್ ಸಿಟಿಯಲ್ಲಿ ಆಯೋಜನೆಗೊಂಡಿದೆ. 

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಟ್‌ಸಿಂಥೆಸಿಸ್ ಸಂಸ್ಥಾಪಕ ಮತ್ತು ಸಿಇಓ ರಾಜನ್ ನವಾನಿ ಅವರು, “ಜಿಇಪಿಎಲ್ ಭಾರತದ ವೀಡಿಯೊ ಗೇಮಿಂಗ್ ಮತ್ತು ಕ್ರೀಡಾ ಸಂಸ್ಕೃತಿಗಳನ್ನು ಒಗ್ಗೂಡಿಸುವ ಸಂಘಟಿತ ಮತ್ತು ವಿಸ್ತರಿಸಬಹುದಾದ ವೇದಿಕೆಗಳನ್ನು ನಿರ್ಮಿಸುವ ನಮ್ಮ ಬದ್ಧತೆಗೆ ಉತ್ತಮ ಪುರಾವೆಯಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜಿಇಪಿಎಲ್ ನ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷ ತಂದಿದೆ ಎಂದು ಹೇಳಿದರು.

ಜಿಇಪಿಎಲ್ ಸೀಸನ್ 2 ರ ಮೊದಲ ದಿನ 4 ರೋಚಕ ಪಂದ್ಯಗಳು ನಡೆದವು. ಬೆಂಗಳೂರು ಬ್ಯಾಡ್ಜರ್ಸ್ ಮತ್ತು ಮುಂಬೈ ಗ್ರಿಜ್ಲೀಸ್ ಮಧ್ಯೆ ಎರಡು ರೋಚಕ ಪಂದ್ಯಗಳು ನಡೆಯಿತು.

ಸೀಸನ್ 1 ರಲ್ಲಿ 2 ಲಕ್ಷ ಆಟಗಾರರ ನೋಂದಣಿ ಆಗಿದ್ದು, ಸೀಸನ್ 2 ಈ ಸಂಖ್ಯೆ 9.1 ಲಕ್ಷಕ್ಕೆ ಏರಿಕೆಯಾಗಿದೆ. ಈ ಸೀಸನ್ ನಲ್ಲಿ ಒಟ್ಟು 34 ಪಂದ್ಯಗಳು ನಡೆಯಲಿದೆ. ಒಟ್ಟು ಬಹುಮಾನದ ಮೊತ್ತವು 2.51 ಕೋಟಿ ರೂ. ನಿಂದ 3.05 ಕೋಟಿ ರೂ. ಗೆ ಏರಿಕೆಯಾಗಿದೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ಫ್ರಾಂಚೈಸಿ ಮಾಲಕರುಗಳಾದ ಸಾರಾ ತೆಂಡೂಲ್ಕರ್, ಪ್ರಶಾಂತ್ ಪ್ರಕಾಶ್, ಅಂಕಿತ್ ನಾಗೋರಿ, ಅಮಿತ್ ಮೆಹತಾ, ಮತ್ತು ಗೋಪಾಲ್ ಶ್ರೀನಿವಾಸನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News