ಕೊಚಾಡಿಯನ್ ಚಲನಚಿತ್ರ ಪ್ರಕರಣ: ಲತಾ ರಜನಿಕಾಂತ್ ಖುದ್ದು ಹಾಜರಿಗೆ ಕೋರ್ಟ್ ಸೂಚನೆ

Update: 2023-12-04 17:44 GMT

ಬೆಂಗಳೂರು: ತಮಿಳಿನ ‘ಕೊಚಾಡಿಯನ್’ ಚಲನಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ನಟ ರಜನಿಕಾಂತ್ ಅವರ ಪತ್ನಿ ಲತಾ ವಿರುದ್ಧ ಫೋರ್ಜರಿ ಪ್ರಕರಣ ಸಂಬಂಧ 2024ರ ಜ.6ರ ಒಳಗಾಗಿ ವಿಚಾರಣೆಗೆ ಹಾಜರಾಗಲು ಬೆಂಗಳೂರು ನ್ಯಾಯಾಲಯ ಸೂಚನೆ ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನಗರದ 1ನೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಪ್ರಕರಣವು ಐಪಿಸಿ 463ರ ಅಡಿ (ಫೋರ್ಜರಿ) ಆಗಿರುವುದರಿಂದ ಆರೋಪಿತರು ಖುದ್ದು ಹಾಜರಾಗಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಮುಂದೂಡಿದೆ.

ವಿಚಾರಣೆ ವೇಳೆ ಲತಾ ರಜನಿಕಾಂತ್ ಪರ ವಕೀಲರು, ಆರೋಪಿತರನ್ನು ಖುದ್ದು ಹಾಜರಿಯಿಂದ ವಿನಾಯತಿ ನೀಡಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಆರೋಪ ಜಾಮೀನು ರಹಿತ ಆಗಿರುವುದರಿಂದ ಖುದ್ದು ಹಾಜರಾಗಬೇಕು ಎಂದು ಸೂಚನೆ ನೀಡಿತು.

ಪ್ರಕರಣವೇನು?: ರಜನಿಕಾಂತ್ ಅವರ ಪುತ್ರಿ ತಮಿಳಿನ ಕೊಚಾಡಿಯನ್ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಚಿತ್ರದ ಸಂಬಂಧ ಮೆರ್ಸಸ್ ಅಂಡ್ ಬ್ಯೂರೋ ಅಡ್ವರ್‍ಟೈಸ್ಮೆಂಟ್ ಪ್ರ್ರೈವೇಟ್ ಲಿಮಿಟೆಡ್ ಮತ್ತು ಮೆರ್ಸಸ್ ಮೀಡಿಯಾ ಒನ್ ಗ್ಲೋಬಲ್ ಎಂಟರ್‍ಟೈನ್ಮೆಂಟ್ ಲಿಮಿಟೆಡ್ ನಡುವೆ ಆರ್ಥಿಕ ವಹಿವಾಟು ನಡೆದಿತ್ತು.

ಮೀಡಿಯಾ ಒನ್ ಕಂಪೆನಿ ಪರವಾಗಿ ಲತಾ ಅವರು ಭದ್ರತಾ ಖಾತರಿ ನೀಡಿದ್ದರು. ಆದರೆ, ಚಿತ್ರ ನಷ್ಟಕ್ಕೆ ಗುರಿಯಾಗಿದ್ದರೂ ಮೆರ್ಸಸ್ ಅಂಡ್ ಬ್ಯೂರೋ ಅಡ್ವರ್‍ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್‍ಗೆ ನಷ್ಟ ಪರಿಹಾರ ತುಂಬಿಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೆರ್ಸಸ್ ಅಂಡ್ ಬ್ಯೂರೋ ಅಡ್ವರ್‍ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್‍ನವರು, ಹಲಸೂರು ಗೇಟ್ ಪೊಲೀಸ್ ಠಾಣೆಗೆ ಖಾಸಗಿ ದೂರು ದಾಖಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News