ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಗೆ ಮಹಾರಾಷ್ಟ್ರ ಸಾರಿಗೆ ಸಚಿವರ ಭೇಟಿ

Update: 2025-02-02 19:02 IST
ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಗೆ ಮಹಾರಾಷ್ಟ್ರ ಸಾರಿಗೆ ಸಚಿವರ ಭೇಟಿ
  • whatsapp icon

ಬೆಂಗಳೂರು : ಮಹಾರಾಷ್ಟ್ರ ಸರಕಾರದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ನೇತೃತ್ವದ ಮಹಾರಾಷ್ಟ್ರದ ಅಧಿಕಾರಿಗಳ ತಂಡವು ಇಲ್ಲಿನ ಶಾಂತಿನಗರದ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ, ಕಾರ್ಯಾಗಾರಕ್ಕೆ ರವಿವಾರದಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ವೇಳೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಿಗಮದಲ್ಲಿನ ಪ್ರತಿಷ್ಠಿತ ವಾಹನಗಳ ಕಾರ್ಯಾಚರಣೆ, ಕಾರ್ಮಿಕ ಕಲ್ಯಾಣ ಉಪಕ್ರಮಗಳು, ವಾಣಿಜ್ಯ ಆದಾಯ, ಬಸ್ಸುಗಳ ಪುನಃಶ್ಚೇತನ/ನವೀಕರಣ, ಇ-ಟೆಕೇಟಿಂಗ್, ಅಪಘಾತ ವಿಮೆ ಇತರೆ ಉಪಕ್ರಮಗಳ ಬಗ್ಗೆ ಪ್ರತಾಪ್ ಅವರಿಗೆ ಮಾಹಿತಿ ನೀಡಿದರು.

ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ದಲ್ಲಿರುವ ಐರಾವತ ಕ್ಲಬ್ ಕಾಸ್, ಐರಾವತ ಕ್ಲಬ್ ಕಾಸ್ 2.0, ಅಂಬಾರಿ ಡ್ರೀಮ್ ಕ್ಲಾಸ್, ಪಲ್ಲಕ್ಕಿ, ಅಂಬಾರಿ ಉತ್ಸವ, ಫ್ಲೈ ಬಸ್, ನಗರ ಸಾರಿಗೆ, ರಾಜಹಂಸ ಹಾಗೂ ಅಶ್ವಮೇಧ ವಾಹನಗಳನ್ನು ವೀಕ್ಷಿಸಿದರು. ಘಟಕ ಹಾಗೂ ಕಾರ್ಯಾಗಾರ ನಿರ್ವಹಣೆ, ವಾಹನಗಳಿಗೆ ನೀಡಿರುವ ಬ್ರಾಂಡಿಗ್ ಹಾಗೂ ವಾಹನಗಳ ಪುನಶ್ಚೇತನ ಕಾರ್ಯ ಹಾಗೂ ಹಲವು ಉಪಕ್ರಮಗಳ ಕುರಿತು ಅಧಿಕಾರಿಗಳ ತಂಡವು ಮೆಚ್ಚುಗೆ ವ್ಯಕ್ತಪಡಿಸಿತು.

ಈ ಸಂದರ್ಭದಲ್ಲಿ ಎಂಎಸ್‍ಆರ್‍ಟಿಸಿಯ ಉಪಾಧ್ಯಕ್ಷ ಮಾಧವ್ ಕುಸೆಕರ್, ಕೆಎಸ್ಸಾರ್ಟಿಸಿಯ ಉಪಾಧ್ಯಕ್ಷ ರಿಜ್ವಾನ್ ನವಾಬ್ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಇದ್ದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News