ಜಾತಿಗಣತಿ ವರದಿ ಜಾರಿಯಾಗಬಾರದು ಎಂಬುದು ಸರಿಯಲ್ಲ: ಡಾ.ಜಿ.ಪರಮೇಶ್ವರ್

Update: 2023-12-17 09:32 GMT

ಬೆಂಗಳೂರು, ಡಿ.17: ಜಾತಿ ಗಣತಿಯ ವರದಿಯ ಪರಿಣಾಮದ ಬಗ್ಗೆ ಸಲಹೆಗಳನ್ನು ನೀಡಲಿ. ಆದರೆ, ಜಾರಿಯಾಗಬಾರದು ಎಂಬುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ಜಾತಿ ಗಣತಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶ ನಡೆಯುತ್ತಿದೆ. ಇದಕ್ಕೆ ಪ್ರತಿಯಾಗಿ ಎಂಬಂತೆ ಲಿಂಗಾಯತ ಸಮಾವೇಶ ಆಗುತ್ತದೆಯಂತೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಚಿವರು ಈ ರೀತಿ ಪ್ರತಿಕ್ರಿಯಿಸಿದರು.

ಸರ್ಕಾರ ತೀರ್ಮಾನ ಮಾಡಿ, ಜಾತಿ ಗಣತಿಗೆ ಹಣ ಖರ್ಚು ಮಾಡಿದೆ. ವರದಿಯ ಇಂಪ್ಯಾಕ್ಟ್ ಬಗ್ಗೆ, ಬೇರೆಬೇರೆ ತೀರ್ಮಾನಗಳ ಬಗ್ಗೆ ಪ್ರತಿಭಟಿಸಿ, ಸಲಹೆಗಳನ್ನು ನೀಡಲಿ. ಇದಕ್ಕೆ ತಕರಾರು ಏನು ಇಲ್ಲ. ಆದರೆ, ವರದಿ ಜಾರಿಯಾಗಬಾರದು ಎನ್ನುವುದು ಸರಿಯಲ್ಲ ಎಂದರು.

ಜನರನ್ನು ಮಲದ ಗುಂಡಿಗೆ ಇಳಿಸಿ, ಸ್ವಚ್ಛತೆ ಮಾಡಿಸುವುದನ್ನು ಈ ಹಿಂದೆ ದೇವರಾಜ ಅರಸು ಅವರ ಅವಧಿಯಲ್ಲಿ ಬವಸಲಿಂಗಪ್ಪನವರು ನಿಷೇಧಿಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವನಹಳ್ಳಿಯ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಲದ ಗುಂಡಿ ಸ್ವಚ್ಛತೆಗೆ ಶಾಲಾ ಮಕ್ಕಳನ್ನು ಬಳಸಿಕೊಂಡದ್ದು ಖಂಡನೀಯ. ಹಾಸ್ಟೆಲ್ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News