‘ಕಿಯೋನಿಕ್ಸ್ ಐಟಿಯೇತರ ಉಪಕರಣಗಳ ಖರೀದಿ’ಯಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆ: ಲೆಕ್ಕ ನಿಯಂತ್ರಕರ ವರದಿ

Update: 2025-03-20 00:13 IST
‘ಕಿಯೋನಿಕ್ಸ್ ಐಟಿಯೇತರ ಉಪಕರಣಗಳ ಖರೀದಿ’ಯಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆ: ಲೆಕ್ಕ ನಿಯಂತ್ರಕರ ವರದಿ
  • whatsapp icon

ಬೆಂಗಳೂರು : ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ(ಕಿಯೋನಿಕ್ಸ್)ದಿಂದ ಸಾಮಾಗ್ರಿಗಳ ಖರೀದಿ ಮತ್ತು ಪೂರೈಕೆಯಲ್ಲಿ ಖರೀದಿ ಇಲಾಖೆಗಳು ಮತ್ತು ಕಿಯೋನಿಕ್ಸ್ ಐಟಿಯೇತರ ಉಪಕರಣಗಳನ್ನು ಖರೀದಿಸುವ ಮೂಲಕ ಕೆಟಿಪಿಪಿ ಕಾಯ್ದೆಯಡಿಯಲ್ಲಿ ರಾಜ್ಯ ಸರಕಾರ ನೀಡಿದ ವಿನಾಯಿತಿಯ ಷರತ್ತುಗಳನ್ನು ಉಲ್ಲಂಘಿಸಿವೆ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು 2023ರ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ವರ್ಷದ ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳ ಮೇಲಿನ ವರದಿಯಲ್ಲಿ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ವರದಿಯನ್ನು ಮಂಡನೆ ಮಾಡಿದರು. ಬಿಎಗಳ ದಾಖಲಾತಿಯಲ್ಲಿ ಯಾವುದೇ ಪಾರದರ್ಶಕತೆ ಇರಲಿಲ್ಲ ಮತ್ತು ಕಿಯೋನಿಕ್ಸ್ ಮೂಲ ಸಲಕರಣೆ ತಯಾರಕರು ಅಥವಾ ಅವುಗಳ ಅಧಿಕೃತ ಡೀಲರ್‍ಗಳನ್ನು ಬಿಎಗಳಾಗಿ ನೋಂದಾಯಿಸಲಿಲ್ಲ ಎಂದು ವರದಿ ಉಲ್ಲೇಖಿಸಿದೆ.

ಕಿಯೋನಿಕ್ಸ್ ಮೂರು ಬಳಕೆದಾರರ ಇಲಾಖೆಗಳು, ಸಂಸ್ಥೆಗಳ ಖರೀದಿಗೆ ಸಂಬಂಧಿಸಿದಂತೆ ಸಲಕರಣೆಗಳ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಿಂತ(27.84 ಕೋಟಿ ರೂ.) ಹೆಚ್ಚಿನ ಬೆಲೆಯಲ್ಲಿ ಉಪಕರಣಗಳನ್ನು(75.81 ಕೋಟಿ ರೂ.) ಸರಬರಾಜು ಮಾಡಿತು. ಇದು ಸಾರ್ವಜನಿಕರ ಬೊಕ್ಕಸಕ್ಕೆ 47.97 ಕೋಟಿ ರೂ.ಹೆಚ್ಚುವರಿ ಆರ್ಥಿಕ ಹೊರೆಯನ್ನುಂಟು ಮಾಡಿತು.

ಪಿಓಗಳ ಮಾದರಿಯ 240.25 ಕೋಟಿ ರೂ.ಮೊತ್ತದ ಆಡಿಟ್ ಪರಿಶೀಲನೆಯಲ್ಲಿ 154.44 ಕೋಟಿ ರೂ.ಮೌಲ್ಯದ ನಾಲ್ಕು ಪಿಇಗಳ 18 ಆದೇಶಗಳನ್ನು 4ಜಿ ವಿನಾಯಿತಿ ಪಡೆಯಲು ಮತ್ತು ಪೂರೈಕೆ ಆದೇಶಗಳನ್ನು ನೇರವಾಗಿ ಕಿಯೋನಿಕ್ಸ್‌ ಗೆ ವಹಿಸಲು ವಿಂಗಡಿಸಿದವು ಎಂದು ತಿಳಿದು ಬಂದಿದೆ. ಬಳಕೆದಾರರ ಇಲಾಖೆ, ಸಂಸ್ಥೆಗೆ ಉಪಕರಣಗಳ ನಿಜವಾದ ವಿತರಣೆಯನ್ನು ಖಾತ್ರಿಪಡಿಸದೆಯೇ 9.36 ಕೋಟಿ ರೂ.ಮೊತ್ತದ ಪಾವತಿಗಳನ್ನು ಬಿಎಗಳಿಗೆ ಮಾಡಲಾಗಿದೆ.

ಸಲಕರಣೆಗಳ ವಿತರಣೆಯನ್ನು ಪರಿಶೀಲಿಸಲು ಬಿಎ ಗಳಿಂದಲೇ ಮೂರನೆ ವ್ಯಕ್ತಿಗಳನ್ನು ನೇಮಿಸಲಾಗಿತ್ತು. ಕಿಯೋನಿಕ್ಸ್‌ ನಿಂದ ಟಿಪಿವಿ ಸಿಬ್ಬಂದಿಗೆ ಯಾವುದೇ ಸ್ಪಷ್ಟ ನಿರ್ದೇಶನಗಳು, ಮಾರ್ಗಸೂಚಿಗಳು, ಇತ್ಯಾದಿ ಇರಲಿಲ್ಲ. ಅಲ್ಲದೇ, 347 ಪರೀಕ್ಷಿಸಿದ ಪ್ರಕರಣಗಳಲ್ಲಿ 155ರಲ್ಲಿ ಟಿಪಿವಿ ನಡೆಸದೆಯೇ 85.98 ಕೋಟಿ ರೂ. ಪಾವತಿ ಮಾಡಲಾಗಿತ್ತು. ನಕಲಿ ವಿತರಣಾ ಚಲನ್‍ಗಳು ಮತ್ತು ನಕಲಿ ಟಿಪಿವಿ ವರದಿಗಳ ಮೇಲೆ ಬಿಎಗಳಿಗೆ ಪಾವತಿ ಮಾಡಿದ ನಿರ್ದಶನಗಳನ್ನು ಆಡಿಟ್ ಗಮನಿಸಿದೆ. ಕೆಲವು ನಿರ್ದಶನಗಳಲ್ಲಿ, ಉಪಕರಣಗಳ ವಿತರಣೆಯ ನಿಜವಾದ ದಿನಾಂಕಕ್ಕಿಂತ ಮುಂಚೆಯೇ ಟಿಪಿವಿ ನಡೆಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

30 ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳಿಗೆ ರಾಜ್ಯ ಸರಕಾರ ನೀಡಿದ 10,308.94 ಕೋಟಿ ರೂ.ಮೊತ್ತದ ದೀರ್ಘಾವಧಿಯ ಸಾಲಗಳು 2023ರ ಮಾ.31ಕ್ಕೆ ಬಾಕಿ ಉಳಿದಿವೆ, ಅದರಲ್ಲಿ 444.60 ಕೋಟಿ ರೂ.ಮೊತ್ತದ ಸಾಲಗಳು ಒಂಭತ್ತು ಕೆಲಸ ಮಾಡದ ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳಿಂದ ಬಾಕಿ ಉಳಿದಿವೆ. ಇದಲ್ಲದೆ, 30 ರಲ್ಲಿ 15 ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳು 1891.62 ಕೋಟಿ ರೂ.ಮೊತ್ತದ ಬಾಕಿ ಉಳಿದಿರುವ ಬಡ್ಡಿಯನ್ನು ಹೊಂದಿದ್ದವು. ಅದರಲ್ಲಿ 1541.26 ಕೋಟಿ ರೂ.ಮೂರು ವರ್ಷಗಳಿಗೂ ಹೆಚ್ಚು ಕಾಲ ಬಾಕಿ ಉಳಿದಿವೆ.

ಲಾಭ ಗಳಿಸುತ್ತಿರುವ 57ರಲ್ಲಿ 16 ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳು 307.46 ಕೋಟಿ ರೂ.ಮೊತ್ತದ ಲಾಭಾಂಶವನ್ನು ಪಾವತಿಸಿದರೆ, 56 ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳು ವರ್ಷದಲ್ಲಿ 7449.75 ಕೋಟಿ ರೂ.ನಷ್ಟವನ್ನು ಅನುಭವಿಸಿವೆ. 2023ರ ಮಾ.31ರಂತೆ 60 ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳು 46,814.47 ಕೋಟಿ ರೂ.ಮೊತ್ತದಷ್ಟು ಕ್ರೋಢೀಕೃತ ನಷ್ಟಗಳನ್ನು ಹೊಂದಿದ್ದವು. ಈ 60 ಉದ್ದಿಮೆಗಳಲ್ಲಿ 40ರಲ್ಲಿ ನಿವ್ವಳ ಮೌಲ್ಯವು ಸಂಪೂರ್ಣವಾಗಿ ಸವೆದು ಹೋಗದೆ. ಅದರ ನಿವ್ವಳ ಮೌಲ್ಯವು 10,695.05 ಕೋಟಿ ರೂ.ಪಾವತಿಸಿದ ಈಕ್ವಿಟಿಯ ವಿರುದ್ಧ(-)23,297.91 ಕೋಟಿ ರೂ.ಗಷ್ಟಿತ್ತು.

21 ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳಲ್ಲಿ ಏಳು ಉದ್ದಿಮೆಗಳು ಕಂಪೆನಿ ಕಾರ್ಯದರ್ಶಿಯನ್ನು ಶಾಶ್ವತ ಆಧಾರದ ಮೇಲೆ ನೇಮಿಸಲು ವಿಫಲವಾಗಿವೆ. 21 ಉದ್ದಿಮೆಗಳು ವರ್ಷದಲ್ಲಿ ಸಿಎಸ್‍ಆರ್ ಚಟುವಟಿಕೆಗಳಿಗೆ 70.22 ಕೋಟಿ ರೂ.ಮಂಜೂರು ಮಾಡಿದ್ದು, ಅದರ ವಿರುದ್ಧ ಕೇವಲ 50.42 ಕೋಟಿ ರೂ.ಖರ್ಚು ಮಾಡಿವೆ. ಒಂಭತ್ತು ಉದ್ದಿಮೆಗಳು ವರ್ಷಕ್ಕೆ ಮಾಡಿದ ಹಂಚಿಕೆಗಿಂತ 19.86 ಕೋಟಿ ರೂ.ಕಡಿಮೆ ಖರ್ಚು ಮಾಡಿವೆ. ಒಂಭತ್ತು ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳಲ್ಲಿ ಐದು ಖರ್ಚು ಮಾಡದ ಮೊತ್ತವನ್ನು ನಿರ್ದಿಷ್ಟ ಸಿಎಸ್‍ಆರ್ ಖಾತೆಗೆ ವರ್ಗಾಯಿಸಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೃಷ್ಣ ಭಾಗ್ಯ ಜಲ ನಿಗಮದಿಂದ ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ ಕಾಮಗಾರಿ ಆರಂಭಿಸಿದ ಪರಿಣಾಮ ಕಾಮಗಾರಿ ಸ್ಥಗಿತಗೊಂಡಿದ್ದು, 30 ಕೋಟಿ ರೂ.ವೆಚ್ಚವನ್ನು ತಡೆ ಹಿಡಿಯಲಾಗಿದೆ. ಕಾಮಗಾರಿಯ ವ್ಯಾಪ್ತಿಯ ಬದಲಾವಣೆಗೆ ಅನುಗುಣವಾಗಿ ಒಪ್ಪಂದದ ಮೊತ್ತದ ಬೆಲೆಯಲ್ಲಿನ ಬದಲಾವಣೆಗೆ ಸಂಬಂಧಿಸಿದ ಒಪ್ಪಂದದ ಷರತ್ತನ್ನು ಅನ್ವಯಿಸಲು ವಿಫಲರಾದ ಕಾರಣ ಗುತ್ತಿಗೆದಾರರಿಗೆ 29.77 ಕೋಟಿ ರೂ.ಅನುಚಿತ ಆರ್ಥಿಕ ಲಾಭ ಉಂಟಾಗಿದೆ. ವಿದ್ಯುತ್ ಬಿಲ್‍ಗಳ ನಿಖರತೆಯನ್ನು ಪರಿಶೀಲಿಸುವಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ವಿಫಲವಾದ ಕಾರಣ 16.89 ಕೋಟಿ ರೂ.ಮೊತ್ತದ ವಿದ್ಯುತ್ ಶುಲ್ಕವನ್ನು ಹೆಚ್ಚುವರಿಯಾಗಿ ಪಾವತಿಸಲಾಗಿದೆ.

ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಜಾರಿಯಾಗದಿರುವ ಚರಂಡಿ ಕಾಮಗಾರಿಗೆ 33.95 ಲಕ್ಷ ರೂ.ಮೊತ್ತದ ಸುಳ್ಳು ಪ್ರಮಾಣ ಪತ್ರ ನೀಡಿ ವಂಚನೆ ಮಾಡಲಾಗಿದೆ. ಕರ್ನಾಟಕ ನೀರಾವರಿ ನಿಗವು ವಂಚನೆಯ ಇನ್‍ವಾಯ್ಸ್‍ಗಳ ಆಧಾರದ ಮೇಲೆ 40.16 ಕೋಟಿ ರೂ.ಮುಂಗಡ ಪಾವತಿ ಮಾಡಿದೆ. ಇದರಿಂದ 4.53 ಕೋಟಿ ರೂ. ಬಡ್ಡಿ ನಷ್ಟವಾಗಿದೆ ಎಂದು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News