ಬೆಂಗಳೂರು | ಬ್ಯಾರಿಸ್ ಸೆಂಟ್ರಲ್ ಕಮಿಟಿಯಿಂದ ‘ದಾವತ್ ಏ ಇಫ್ತಾರ್’
Update: 2025-03-20 00:15 IST

ಬೆಂಗಳೂರು : ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ವತಿಯಿಂದ ‘ದಾವತ್ ಏ ಇಫ್ತಾರ್’ ಕಾರ್ಯಕ್ರಮವನ್ನು ಇಲ್ಲಿನ ಹಕ್ ಹೌಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ಅಧ್ಯಕ್ಷ ಶಬೀರ್ ಬ್ರಿಗೇಡ್ ವಹಿಸಿದ್ದರು. ಕಾರ್ಯಕ್ರಮವು ಮೆಜೆಸ್ಟಿಕ್ ವಿಸ್ಡಮ್ ಮಸೀದಿ ಖತೀಬರಾದ ಮೌಲಾನ ಶಾಫಿ ಸ'ಅದಿ ಉಸ್ತಾದ್ ಇವರ ದುವಾ ಆಶೀರ್ವಚನ ಮೂಲಕ ಉದ್ಘಾಟನೆಗೊಂಡಿತು. ಟಿವಿ-9ನ ಚೀಫ್ ಪ್ರೊಡ್ಯೂಸ್ ರಹ್ಮಾನ್ ಹಾಸನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.