ಆರ್.ರಾಮಚಂದ್ರ ಸೇರಿ ನಾಲ್ವರಿಗೆ ಕಸಾಪದ ‘ಅಭಯಲಕ್ಷ್ಮಿ’ ದತ್ತಿ ಪ್ರಶಸ್ತಿ
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್‍ನ 2024ನೇ ಸಾಲಿನ ‘ಅಭಯಲಕ್ಷ್ಮಿ’ ದತ್ತಿ ಪ್ರಶಸ್ತಿಗೆ ಡಾ.ಜಯಮಾಲ ಪೂವಣಿ, ಆರ್.ವೆಂಕಟರಾಜು, ಶಾಂತಲ ಧರ್ಮರಾಜ್, ಆರ್.ರಾಮಚಂದ್ರ ಆಯ್ಕೆಯಾಗಿದ್ದಾರೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ತಿಳಿಸಿದ್ದಾರೆ.
2024ನೇ ಸಾಲಿನ ಈ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಡಾ.ಜಯಮಾಲಾ ಪೂವಣಿಯವರು ಸಮಾಜ ವಿಜ್ಞಾನದಲ್ಲಿ ಪದವಿ ಪಡೆದ ಮೊದಲ ಜೈನ ಮಹಿಳೆ ಎಂಬ ಸಾಧನೆ ಮಾಡಿರುವ ಅವರು ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಸ್ವಯಂ ನಿವೃತ್ತಿ ಪಡೆದವರು, ಸಾಹಿತ್ಯ, ರಂಗಭೂಮಿ, ಅಧ್ಯಾತ್ಮ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಯನ್ನು ಮಾಡಿದ್ದಾರೆ, ಆರ್.ವೆಂಕಟರಾಜು ಹವ್ಯಾಸಿ ರಂಗಭೂಮಿಯ ಪ್ರಮುಖ ನಿರ್ದೇಶಕರ ನಾಟಕಗಳೂ ಸೇರಿದಂತೆ 150ಕ್ಕೂ ಹೆಚ್ಚಿನ ನಾಟಕಗಳಲ್ಲಿ ಅಭಿನಯಿಸಿರುತ್ತಾರೆ ಎಂದು ತಿಳಿಸಿದ್ದಾರೆ.
ಶಾಂತಲ ಧರ್ಮರಾಜ್ 3 ದಶಕಗಳಿಂದ ಕ್ರಿಯಾಶೀಲ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಭಿನ್ನ ಶೈಲಿಯ ವರದಿ-ಲೇಖನಗಳನ್ನು ಅವರ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ನೀಡಿದ್ದು, ಪತ್ರಿಕೋದ್ಯಮಕ್ಕೆ ಹೊಸ ರೂಪ ನೀಡಿದ್ದಾರೆ. ಆರ್.ರಾಮಚಂದ್ರ ಕರುನಾಡ ರಂಗ ಕಲಾವಿದರ ಒಕ್ಕೂಟದ ಗೌರವಾಧ್ಯಕ್ಷರಾಗಿದ್ದು, ಪ್ರಚಂಡ ರಾವಣ, ಸತ್ಯ ಹರಿಶ್ಚಂದ್ರ, ಮಹಾಭಾರತ, ಎಚ್ಚಮ ನಾಯಕ ಮೊದಲಾದ ನಾಟಕಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.