ಪೋಪ್ ಅಂತ್ಯಕ್ರಿಯೆ: ಸರಕಾರದ ಪರವಾಗಿ ಕೆ.ಜೆ.ಜಾರ್ಜ್, ಐವಾನ್ ಡಿಸೋಜಾ ಭಾಗಿ
Update: 2025-04-24 22:02 IST
ಬೆಂಗಳೂರು : ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯನ್ನು ಎ.26ರ ಶನಿವಾರ ಪೂರ್ವಾಹ್ನ ವ್ಯಾಟಿಕನ್ ಸಿಟಿಯ ಸ್ಥಳೀಯ ಸಮಯವಾದ 10 ಗಂಟೆಗೆ ಸಂತ ಪೀಟರ್ಸ್ ಚೌಕದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಈ ಅಂತ್ಯಕ್ರಿಯೆಯಲ್ಲಿ ರಾಜ್ಯ ಸರಕಾರದ ಪರವಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಭಾಗವಹಿಸಲು ನಿಯೋಜಿಸಲಾಗಿದೆ.