ಸೇವಾ ಭಡ್ತಿ ನೀಡದ ವಿಚಾರ: ಹೈಕೋರ್ಟ್ ಮೊರೆಹೋದ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್
ಬೆಂಗಳೂರು : ಸೇವಾ ಭಡ್ತಿ ನೀಡುವಂತೆ ಕೋರಿ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮನವಿಯನ್ನು 8 ವಾರಗಳಲ್ಲಿ ಕಾನೂನಿನಂತೆ ಪರಿಗಣಿಸಲು ಸರಕಾರಕ್ಕೆ ಸೂಚನೆ ನೀಡಿ ಹೈಕೋರ್ಟ್ ಆದೇಶ ನೀಡಿದೆ.
ತಮಗೆ ಸಲ್ಲಬೇಕಾದ ಭಡ್ತಿ ತಡೆಹಿಡಿದಿರುವ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ರೂಪಾ ಮೌದ್ಗಿಲ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಇದೇ ವೇಳೆ ರೂಪಾ ಮೌನ್ಸಿಲ್ ಅರ್ಜಿಗೆ ಆಕ್ಷೇಪಿಸಿ ರೋಹಿಣಿ ಸಿಂಧೂರಿಯ ಮಧ್ಯಂತರ ಅರ್ಜಿಯನ್ನು ಹಿರಿಯ ವಕೀಲ ಕೆ.ಎನ್.ಫಣೀಂದ್ರ ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ ರೋಹಿಣಿ ಪರ ವಾದ ಆಲಿಸಬೇಕಿಲ್ಲವೆಂದು ರೂಪಾ ಮೌದ್ಗಿಲ್ ಪರ ವಕೀಲ ಬಿಪಿನ್ ಹೆಗ್ಡೆ ಆಕ್ಷೇಪ ವ್ಯಕ್ತಪಡಿಸಿದರು.
ಆದರೆ ವಾದ ಪ್ರತಿ ವಾದ ಆಲಿಸಿದ ಪೀಠ, ರೂಪಾ ಮೌದ್ಗಿಲ್ ಮನವಿಯನ್ನು8 ವಾರಗಳಲ್ಲಿ ಕಾನೂನಿನಂತೆ ಪರಿಗಣಿಸಲು ಆದೇಶಿದರು. ರೂಪಾ ಮೌದ್ಗಿಲ್, ರೋಹಿಣಿ ಸಿಂಧೂರಿ ಮಾನನಷ್ಟ ದಾವೆ, ಪ್ರತಿದಾವೆ ಹೂಡಿದ್ದಾರೆ. ಈ ಕಾರಣಕ್ಕೆ ಭಡ್ತಿ ತಡೆಹಿಡಿದಿರುವುದಾಗಿ ರಾಜ್ಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದೆ. ಹಾಗಾಗಿ ರೂಪಾ ಮೌದ್ಗಿಲ್ ಹೈಕೋರ್ಟ್ ಮೊರೆ ಹೋಗಿದ್ದರು