ಬಿಜೆಪಿಗೆ ಹಿಂದೂಗಳ ಮತ ಬೇಕು, ಭಾವನೆಗಳು ಬೇಡ : ಸೌಮ್ಯಾರೆಡ್ಡಿ

Update: 2025-04-29 21:57 IST
ಬಿಜೆಪಿಗೆ ಹಿಂದೂಗಳ ಮತ ಬೇಕು, ಭಾವನೆಗಳು ಬೇಡ : ಸೌಮ್ಯಾರೆಡ್ಡಿ
  • whatsapp icon

ಬೆಂಗಳೂರು : ಕೇಂದ್ರದ ಬಿಜೆಪಿ ಸರಕಾರಕ್ಕೆ ಹಿಂದೂಗಳ ವೋಟ್ ಬೇಕು, ಆದರೆ, ಹಿಂದೂಗಳ ಭಾವನೆಗಳು ಬೇಡವೆನ್ನುತ್ತಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ, ಮಾಜಿ ಶಾಸಕಿ ಸೌಮ್ಯಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ರೈಲ್ವೆ ಇಲಾಖೆ ಪರೀಕ್ಷೆ ಪ್ರವೇಶದಲ್ಲಿ ಕಡ್ಡಾಯವಾಗಿ ಮಂಗಳಸೂತ್ರ ಹಾಗೂ ಜನಿವಾರವನ್ನು ತೆಗೆದು ಬರಬೇಕೆಂಬ ಆದೇಶವನ್ನು ಹಿಂಪಡೆಯಬೇಕೆಂದು ನಗರದ ಸಂಗೊಳ್ಳಿರಾಯಣ್ಣ ವೃತ್ತದಲ್ಲಿರುವ ಕೇಂದ್ರ ರೈಲ್ವೆ ವಿಭಾಗೀಯ ಕಚೇರಿಗೆ ಭೇಟಿ ಮಾಡಿ ಮನವಿ ನೀಡಲು ತೆರಳಿದಾಗ ಮನವಿ ಸ್ವೀಕರಿಸಲು ಹಿಂದೇಟು ಮತ್ತು ಗೆಜೆಡ್ ಪ್ರತಿ ನೀಡಲು ತಿರಸ್ಕಾರ ಮಾಡಿರುವ ಅಧಿಕಾರಿಗಳ ನಡೆಯನ್ನು ಖಂಡಿಸಿ ಅವರು ಮಾತನಾಡಿದರು.

ನ್ಯಾಯ ಕೇಳಲು ಬರುವ ಮಹಿಳೆಯರ ಮೇಲೆ ಎಸಿಪಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಕೇಂದ್ರ ಬಿಜೆಪಿ ಸರಕಾರದ ಅಣತಿಯಂತೆ ಅಧಿಕಾರಿಗಳು ವರ್ತನೆ ಮಾಡುತ್ತಿದ್ದಾರೆ. ರೈಲ್ವೇ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಹೋದರೆ 35ಕ್ಕೂ ಹೆಚ್ಚು ಮಹಿಳೆಯವನ್ನು ವಿನಾಕರಣ ಬಂಧಿಸಿದ್ದು, ಈ ಕ್ರಮ ಸರಿಯಲ್ಲ ಎಂದು ಸೌಮ್ಯಾರೆಡ್ಡಿ ಖಂಡಿಸಿದರು.

ಹಿಂದೂ ವಿರೋಧಿ ಬಿಜೆಪಿ ಸರಕಾರವು ಪಹಲ್ಗಾಮ್‍ನಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟ 26 ಕುಟುಂಬಗಳಗೆ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಪಹಲ್ಗಾಮ್‍ನಲ್ಲಿ ಭದ್ರತಾ ವೈಫಲ್ಯದಿಂದ ಘಟನೆ ಸಂಬಂಧಿಸಿದ್ದು, ಇದಕ್ಕೆ ಕೇಂದ್ರ ಸರಕಾರ ಉತ್ತರಿಸಬೇಕು ಎಂದು ಸೌಮ್ಯಾರೆಡ್ಡಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಮತ್ತು ಮಹಿಳಾ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಭಾಗವಹಿಸಿದ್ದರು.


Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News