‘ಕೀರ್ತನಾಗೆ ಚಿಕಿತ್ಸೆ’ ಕಾರ್ಪೋರೇಟ್ ಕಂಪೆನಿಗಳ ನೆರವು ಕೊಡಿಸಲು ಮುಂದಾದ ಝಮೀರ್ ಅಹ್ಮದ್
Update: 2025-04-30 00:42 IST

ಬೆಂಗಳೂರು : ಅನುವಂಶೀಯ ಅಸ್ವಸ್ಥತೆ ಕಾಯಿಲೆಯಿಂದ ಬಳುತ್ತಿರುವ ಮೈಸೂರಿನ ನಾಗಶ್ರೀ-ಕಿಶೋರ್ ದಂಪತಿಯ ಪುತ್ರಿ ಕೀರ್ತನಾ ಅವರಿಗೆ ಸಿ.ಎಸ್.ಆರ್ ನಿಧಿಯಿಂದ ನೆರವು ಕಲ್ಪಿಸುವ ಸಂಬಂಧ ಕಾರ್ಪೋರೇಟ್ ಸಂಸ್ಥೆಗಳಿಗೆ ಪತ್ರದ ಮೂಲಕ ಮನವಿ ಮಾಡಲು ಸಚಿವ ಝಮೀರ್ ಅಹ್ಮದ್ ಖಾನ್ ಮುಂದಾಗಿದ್ದಾರೆ.
ಕೀರ್ತನಾ ಚಿಕಿತ್ಸೆಗೆ 16 ಕೋಟಿ ರೂ.ಅಗತ್ಯವಿದ್ದು ಝಮೀರ್ ಅಹ್ಮದ್ ಖಾನ್ 25 ಲಕ್ಷ ರೂ.ನೆರವು ನೀಡಿದ್ದು, ಹೆಚ್ಚಿನ ನೆರವಿಗೆ ಕಾರ್ಪೋರೇಟ್ ಕಂಪೆನಿಗಳ ಮುಖ್ಯಸ್ಥರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಮಂಗಳವಾರ ಇಂಡಿಯಾ ಬಿಲ್ಡರ್ಸ್ ಕಾರ್ಪೋರೇಷನ್ ಮಾಲಕ ಝಿಯಾವುಲ್ಲಾ ಶರೀಫ್ ಅವರನ್ನು ಭೇಟಿ ಮಾಡಿ ಈ ಸಂಬಂಧ ಝಮೀರ್ ಅಹ್ಮದ್ ಮನವಿ ಪತ್ರ ಸಲ್ಲಿಸಿದರು. ಸಚಿವರ ಮನವಿಗೆ ಸ್ಪಂದಿಸಿದ ಝಿಯಾವುಲ್ಲಾ ಶರೀಫ್ ಆದಷ್ಟು ನೆರವಿನ ಭರವಸೆ ನೀಡಿದರು.