ತೆರಿಗೆ ಬಾಕಿ ಪಾವತಿ ಮಾಡುವಂತೆ ನಮ್ಮ ಮೆಟ್ರೋಗೆ ಬಿಬಿಎಂಪಿಯಿಂದ ನೋಟಿಸ್

Update: 2024-02-11 15:43 GMT

ಬೆಂಗಳೂರು:  ಮೆಟ್ರೋ ರೈಲು ನಿಗಮವು(ಬಿಎಂಆರ್‌ಸಿಎಲ್) ಬಿಬಿಎಂಪಿಗೆ 53,62,870 ರೂ. ತೆರಿಗೆ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದು, 100 ರೂ. ಸೇರಿ ಶೇ.2ರಷ್ಟು ಬಡ್ಡಿ ದರದೊಂದಿಗೆ ಬಾಕಿಯಿರುವ ತೆರಿಗೆಯನ್ನು ಪಾವತಿ ಮಾಡುವಂತೆ ಬಿಬಿಎಂಪಿ ನೋಟೀಸ್ ಜಾರಿ ಮಾಡಿದೆ.

ಬಿಬಿಎಂಪಿಯ ಸಹ ಕಂದಾಯ ಅಧಿಕಾರಿ ವಸಂತ ನಗರ(ಉಪ-ವಿಭಾಗ) ವಾರ್ಡ್ ಸಂಖ್ಯೆ 110 ವ್ಯಾಪ್ತಿಗೆ ಒಳಪಡುವ ಕಬ್ಬನ್ ರಸ್ತೆಯಲ್ಲಿರುವ ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್ ವಸತಿಯೇತರ ಕಟ್ಟಡಕ್ಕೆ 2011-12ರಿಂದ 2023-24ರವರೆಗೆ ಆಸ್ತಿ ತೆರಿಗೆಯು ಪಾವತಿಮಾಡಿಲ್ಲ. ಈ ಸ್ವತ್ತಿಗೆ ಸ್ವಯಂ ಘೋಷಣೆ ಅಡಿಯಲ್ಲಿ ತೆರಿಗೆಯನ್ನು ಒಂದು ಚದರ ಅಡಿಗೆ ರೂ. 25 ರಂತೆ ಕಂದಾಯ ನಿಗಧಿಪಡಿಸಿದ್ದು, ತೆರಿಗೆ ಬಾಕಿಯನ್ನು ಪಾವತಿ ಮಾಡುವಂತೆ ಸೂಚಿಸಿದೆ.

2023-24ನೇ ಸಾಲಿನಲ್ಲಿ ತೆರಿಗೆ ಸಂಗ್ರಹ ಗುರಿಯನ್ನು ವರ್ಷಾಂತ್ಯದೊಳಗೆ ಸಾಧಿಸಲೇಬೇಕು ಎಂದು ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಅದರಂತೆ ಇದೀಗ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ಜಾರಿ ಮಾಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News