ನಗರ ನಕ್ಸಲರನ್ನು ನಕ್ಸಲ್ ಮುಕ್ತ ಮಾಡಿ : ಎನ್.ರವಿಕುಮಾರ್

Update: 2025-01-10 16:32 GMT

ಬೆಂಗಳೂರು : ನಕ್ಸಲ್ ಮುಕ್ತ ಕರ್ನಾಟಕ ಮಾಡಬೇಕೆಂದರೆ ನಗರ ನಕ್ಸಲರು ನಕ್ಸಲ್ ಮುಕ್ತರಾಗುವಂತೆ ಮಾಡಬೇಕಾದುದು ಸರಕಾರದ ಕರ್ತವ್ಯ ಎಂದು ಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಕಾಡಿನ ನಕ್ಸಲರು ಬೆಳೆಯಲು ನಾಡಿನ ನಕ್ಸಲರೇ ಕಾರಣ. ಈ ಹಿನ್ನೆಲೆಯಲ್ಲಿ ನಗರ ನಕ್ಸಲರು ನಕ್ಸಲ್ ಮುಕ್ತರಾಗುವಂತೆ ಮಾಡಿದರೆ ನಕ್ಸಲ್ ಮುಕ್ತ ಕರ್ನಾಟಕ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಆರು ಮಂದಿ ಕಾಡಿನ ನಕ್ಸಲರು ಶರಣಾಗತರಾಗಿ ನಾಡಿಗೆ ಬಂದಿರುವುದು ಸ್ವಾಗತಾರ್ಹ. ಆದರೆ, ಅವರನ್ನು ಹೀರೋಗಳಂತೆ ಬಿಂಬಿಸಬಾರದು. ಒಂದು ವೇಳೆ ಹಾಗೆ ಬಿಂಬಿಸಿದರೆ ಅವರಿಂದ ತೊಂದರೆ ಅನುಭವಿಸಿದವರು, ಸಾವು-ನೋವಿಗೆ ಒಳಗಾದ ನಾಗರಿಕ ಕುಟುಂಬಗಳಿಗೆ ಸರಕಾರವೇ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಎನ್.ರವಿಕುಮಾರ್ ಟೀಕಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News