ಪ್ರಜ್ವಲ್ ರೇವಣ್ಣ‌ ವಿರುದ್ಧದ ಅತ್ಯಾಚಾರ ಪ್ರಕರಣ | ಜಪ್ತಿ ಮಾಡಿರುವ ಪೋನ್‌ನಲ್ಲಿರುವ ಪೋಟೋಗಳ ಪ್ರತಿ ನೀಡಲು ಹೈಕೋರ್ಟ್‌ ನಕಾರ

Update: 2025-01-16 22:35 IST
ಪ್ರಜ್ವಲ್ ರೇವಣ್ಣ‌ ವಿರುದ್ಧದ ಅತ್ಯಾಚಾರ ಪ್ರಕರಣ | ಜಪ್ತಿ ಮಾಡಿರುವ ಪೋನ್‌ನಲ್ಲಿರುವ ಪೋಟೋಗಳ ಪ್ರತಿ ನೀಡಲು ಹೈಕೋರ್ಟ್‌ ನಕಾರ
  • whatsapp icon

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಜಪ್ತಿ ಮಾಡಿರುವ ಫೋನ್‌ನಲ್ಲಿನ ಎಲ್ಲಾ ಫೋಟೋಗಳ ಪ್ರತಿ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಫೋರೆನ್ಸಿಕ್ ವರದಿಯಲ್ಲಿನ ಫೋಟೋಗಳ ಪ್ರತಿ ಕೇಳಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ‌ ಮನವಿ ಮಾಡಿದ್ದರು. ಅದರೆ ವಿಚಾರಣೆ ನಡೆಸಿದ ಹೈಕೋರ್ಟ್ ಕೇವಲ ಫೋಟೋಗಳನ್ನು ಪರಿಶೀಲಿಸಲು ಮಾತ್ರ ಅವಕಾಶ ನೀಡಿದೆ.

ಫೋನ್‌ನಲ್ಲಿ ಸಂತ್ರಸ್ತೆಯಲ್ಲದೇ ಬೇರೆ ಮಹಿಳೆಯರ ಫೋಟೋಗಳೂ ಇವೆ. ಬೇರೆ ಮಹಿಳೆಯರ ಖಾಸಗಿತನ ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ. ಆರೋಪಿ ಪ್ರಜ್ವಲ್ ರೇವಣ್ಣ ಆದ ಮಾತ್ರಕ್ಕೆ ಕಾನೂನು ಬದಲಾಗುವುದಿಲ್ಲ. ಗೋಪಾಲ ಕೃಷ್ಣನ್ ಕೇಸ್‌ನ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸಬೇಕು. ಫೋನ್‌ನಲ್ಲಿನ ಫೋಟೋಗಳ ಕ್ಲೋನ್ ಕಾಪಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟು ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News